ADVERTISEMENT

ನೀರಜ್‌ಗೆ 90 ಮೀ. ಗಡಿ ದಾಟುವ ವಿಶ್ವಾಸ

ಏಜೆನ್ಸೀಸ್
Published 10 ಮೇ 2024, 0:27 IST
Last Updated 10 ಮೇ 2024, 0:27 IST
<div class="paragraphs"><p>ನೀರಜ್‌ ಚೋಪ್ರಾ</p></div>

ನೀರಜ್‌ ಚೋಪ್ರಾ

   

ದೋಹಾ: ಶುಕ್ರವಾರ ಇಲ್ಲಿ ನಡೆಯುವ ದೋಹಾ ಡೈಮಂಡ್‌ ಲೀಗ್‌ನಲ್ಲಿ ಜಾವೆಲಿನ್‌ ಅನ್ನು 90 ಮೀ.ದೂರಕ್ಕೆಸೆಯುವ ವಿಶ್ವಾಸ ಹೊಂದಿರುವುದಾಗಿ ಒಲಿಂಪಿಕ್ ಚಾಂಪಿಯನ್ ನೀರಜ್‌ ಚೋಪ್ರಾ ಗುರುವಾರ ಇಲ್ಲಿ ಹೇಳಿದರು. ಚೋಪ್ರಾ ಈವರೆಗಿನ ಶ್ರೇಷ್ಠ ಸಾಧನೆ 89.94 ಮೀ. (2022) ಆಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಜ್ಜಾಗಲು ಕತಾರ್‌ನ ರಾಜಧಾನಿಯಲ್ಲಿ ನಡೆಯುವ ಈ ಕೂಟ ಅಥ್ಲೀಟುಗಳಿಗೆ ನೆರವಾಗಲಿದೆ. 26 ವರ್ಷದ ಚೋಪ್ರಾ ಎರಡು ಏಷ್ಯನ್‌ ಗೇಮ್ಸ್‌ ಸ್ವರ್ಣಗಳ ಜೊತೆ ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಚಾಂಪಿಯನ್ ಆಗಿದ್ದಾರೆ. 90 ಮೀ. ಗಡಿದಾಟುವ ಅವರ ಆಸೆ ಇನ್ನೂ ಕೈಗೂಡಿಲ್ಲ.

ADVERTISEMENT

ಯಾನ್‌ ಜೆಲೆಂಝಿ 1996ರಲ್ಲಿ ಜಾವೆಲಿನ್‌ಅನ್ನು 98.48 ಮೀ. ದೂರ ಎಸೆದಿದ್ದು ವಿಶ್ವ ದಾಖಲೆಯಾಗಿದೆ.

2018ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ 88.06 ಮೀ. ಎಸೆದಾಗಿನಿಂದ ತಮಗೆ ಈ ಮೈಲಿಗಲ್ಲಿನ ಪ್ರಶ್ನೆ ಎದುರಾಗುತ್ತಿದೆ ಎಂದು ಅವರು ಹೇಳಿದರು.

ಮೊಣಗಂಟಿನ ಗಾಯದಿಂದ 2019ರಲ್ಲಿ ಅವರು ಯಾವುದೇ ಕೂಟದಲ್ಲಿ ಸ್ಪರ್ಧಿಸಿರಲಿಲ್ಲ. ನಂತರ ಅವರು 88 ಮೀ. ನಿಂದ 90 ಮೀ. ಮಧ್ಯೆ ಎಸೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.