ADVERTISEMENT

ಟೂರ್ನಿಗಳ ಆಯೋಜನೆಗೆ ಸಿದ್ಧತೆ: ಕಿರಣ್‌ ರಿಜಿಜು

ಪಿಟಿಐ
Published 24 ಆಗಸ್ಟ್ 2020, 15:55 IST
Last Updated 24 ಆಗಸ್ಟ್ 2020, 15:55 IST
ಕಿರಣ್‌ ರಿಜಿಜು–ಪಿಟಿಐ ಚಿತ್ರ
ಕಿರಣ್‌ ರಿಜಿಜು–ಪಿಟಿಐ ಚಿತ್ರ   

ನವದೆಹಲಿ: ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸ್ಪರ್ಧಾತ್ಮಕ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಇಲ್ಲಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲಿಸಿಅವರು ಮಾತನಾಡಿದರು.

ಕೋವಿಡ್ ಸೋಂಕು‌ ಪ್ರಕರಣಗಳು ಹೆಚ್ಚುತ್ತಿದ್ದ ಕಾರಣ ಮಾರ್ಚ್‌ನಲ್ಲಿ ಎಲ್ಲ ಕ್ರೀಡಾ ಶಿಬಿರಗಳನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಕೆಲವು ವಾರಗಳಿಂದ ಅಥ್ಲೀಟ್‌ಗಳು ತರಬೇತಿ ಆರಂಭಿಸಿದ್ದಾರೆ. ಹೀಗಾಗಿ ಟೂರ್ನಿಗಳನ್ನುಶೀಘ್ರ ಸಂಘಟಿಸುವ ಕುರಿತು ರಿಜಿಜು ವಿಶ್ವಾಸ ವ್ಯಕ್ತಪಡಿಸಿದರು.

‘ಅಭ್ಯಾಸಕ್ಕೆ ಮರಳಿರುವ ಅಥ್ಲೀಟ್‌ಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸಲಿದ್ದಾರೆ. ಟೂರ್ನಿಗಳನ್ನು ಸಂಘಟಿಸುವಾಗಲೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಕ್ರೀಡಾ ಚಟುವಟಕೆಗಳಿಗೆ ಮರಳಲು ಬೇಕಾದ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕುರಿತು ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದೆ’ ಎಂದು ರಿಜಿಜು ತಿಳಿಸಿದರು.

ADVERTISEMENT

ಅಥ್ಲೆಟಿಕ್ಸ್‌ ಕೂಟಗಳ ಆಯೋಜನೆಗೆ ನೆಹರೂ ಕ್ರೀಡಾಂಗಣ ಮುಖ್ಯ ತಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.