ಬಿಎಫ್‌ಸಿ
ಕೋಲ್ಕತ್ತ: ಮುಂಬರುವ ಇಂಡಿಯನ್ ಸೂಪರ್ ಲೀಗ್ ಋತುವಿಗೆ ಮೂವರು ವಿದೇಶಿ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿರುವುದಾಗಿ ಈಸ್ಟ್ ಬೆಂಗಾಲ್ ತಂಡ ಶುಕ್ರವಾರ ಪ್ರಕಟಿಸಿದೆ.
ಬ್ರೆಜಿಲ್‌ನ ಮಿಡ್‌ಫೀಲ್ಡರ್ ಮಿಗೆಲ್ ಫಿಗುಯೆರಾ, ಪ್ಯಾಲಸ್ತೀನಿನ ಮೊಹಮ್ಮದ್ ರಶೀದ್ ಮತ್ತು ಅರ್ಜೆಂಟೀನಾದ ಡಿಫೆಂಡರ್ ಕೆವಿನ್ ಸಿಬಿಲ್ ಅವರು ಕೋಲ್ಕತ್ತದ ಕ್ಲಬ್ ಸೇರಿಕೊಂಡವರು.
ಮಿಗೆಲ್ ಅವರು ಬಾಂಗ್ಲಾದೇಶದ ವಸುಂಧರಾ ಕಿಂಗ್ಸ್ ಪರ ಎರಡು ಪ್ರೀಮಿಯರ್ ಲೀಗ್ ಮತ್ತು ಸತತ ಎರಡು ಇಂಡಿಪೆಂಡನ್ಸ್ ಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. 64 ಪಂದ್ಯಗಳಲ್ಲಿ 37 ಗೋಲು ಗಳಿಸಿದ್ದು, 26 ಗೋಲಿಗೆ ನೆರವು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.