ಶೂಟಿಂಗ್
ನಿಂಗ್ಬೊ (ಚೀನಾ): ಒಲಿಂಪಿಯನ್ ಇಶಾ ಸಿಂಗ್ ಅವರು 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶನಿವಾರ ಚಿನ್ನದ ಪದಕ ಗೆದ್ದರು. ಆ ಮೂಲಕ ಐಎಸ್‌ಎಸ್‌ಎಫ್ ವಿಶ್ವಕಪ್ ರೈಫಲ್/ ಪಿಸ್ತೂಲ್ ವಿಶ್ವಕಪ್‌ನಲ್ಲಿ ಭಾರತದ ಪದಕದ ಬರವನ್ನು ನೀಗಿಸಿದರು.
ನಿಂಗ್ಬೊ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯ ಫೈನಲ್‌ನಲ್ಲಿ, 20 ವರ್ಷ ವಯಸ್ಸಿನ ಇಶಾ 0.1 ಪಾಯಿಂಟ್‌ನಿಂದ ತವರಿನ ಫೇವರಿಟ್ ಯಾವೊ ಕ್ಸಿಯಾನ್ಸುನ್ ಅವರನ್ನು ಸೋಲಿಸಿದರು. ಕಂಚಿನ ಪದಕ ದಕ್ಷಿಣ ಕೊರಿಯಾದ ಒಹ್ ಯೆಜಿನ್ ಪಾಲಾಯಿತು.
ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆಯಿತು. ಇತರ ನಾಲ್ಕು ತಂಡಗಳಷ್ಟೆ ಚಿನ್ನ ಗೆದ್ದಿವೆ. ಚೀನಾ 2 ಚಿನ್ನ, 4 ಬೆಳ್ಳಿ, 1 ಕಂಚಿನ ಪದಕ ಪಡೆದು ಅಗ್ರಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.