ಮುಂಬೈ: ಇಥಿಯೋಪಿಯಾದ ಹಯ್ಲೆ ಲೆಮಿ ಮತ್ತು ಅಂಚಲೆಮ್ ಹಯ್ಮನೊಟ್ ಅವರು ಮುಂಬೈ ಮ್ಯಾರಥಾನ್‌ನ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಕೂಟ ದಾಖಲೆಯೊಂದಿಗೆ ಪ್ರಶಸ್ತಿ ಜಯಿಸಿದರು.
ಹಯ್ಲೆ ಲೆಮಿ 2 ತಾಸು 7 ನಿಮಿಷ 32 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಅಂಚಲೆಮ್ 2 ತಾಸು 24 ನಿ. 15 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
ಇಬ್ಬರೂ ಅಥ್ಲೀಟ್‌ಗಳು ತಲಾ ₹ 48.50 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.
ಭಾರತೀಯ ಎಲೀಟ್ ಪುರುಷ ಅಥ್ಲೀಟ್‌ಗಳ ವಿಭಾಗದಲ್ಲಿ ಗೋಪಿ ತನಕ್ಕಲ್ 2 ತಾಸು 16 ನಿ. 41 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರೆ, ಮಾನ್ ಸಿಂಗ್ ಮತ್ತು ಕಾಳಿದಾಸ್ ಹಿರಾವೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.
ಭಾರತೀಯ ಎಲೀಟ್ ಮಹಿಳೆಯರ ವಿಭಾಗದಲ್ಲಿ ಚವಿ ಯಾದವ್ (2 ತಾಸು 50.35 ನಿ.) ಮೊದಲ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.