ಬಟುಮಿ: ಭಾರತದ ಕೋನೇರು ಹಂಪಿ ಮತ್ತು ವಂತಿಕಾ ಅಗರವಾಲ್ ಅವರು ಫಿಡೆ ಮಹಿಳಾ ವಿಶ್ವ ಚೆಸ್ ಕಪ್ ಎರಡನೇ ಸುತ್ತಿನ ಪಂದ್ಯಗಳಲ್ಲಿ ಬುಧವಾರ ಗೆಲುವು ಪಡೆದು ಮುಂದಿನ ಸುತ್ತಿನತ್ತ ಹೆಜ್ಜೆಯಿಟ್ಟರು.
ಹಂಪಿ ಅವರು ಕಪ್ಪು ಕಾಯಿಗಳಲ್ಲಿ ಆಡಿ ಉಜ್ಬೇಕಿಸ್ತಾನದ ಅಫ್ರೂಜಾ ಕಾಮ್ದಮೋವಾ ಅವರನ್ನು ಸೋಲಿಸಿದರು. ವಂತಿಕಾ ಅಗರವಾಲ್ ಇನ್ನೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅನ್ನಾ ಉಷೆನಿನಾ ಅವರನ್ನು ಮಣಿಸಿದರು.
ಡಿ.ಹಾರಿಕಾ ಇನ್ನೊಂದು ಪಂದ್ಯದಲ್ಲಿ ಸ್ವದೇಶದ ಪಿ.ವಿ.ನಂದಿತಾ ವಿರುದ್ಧ ಜಯಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.