ADVERTISEMENT

ಫಿಡೆ ಮಹಿಳಾ ವಿಶ್ವ ಕಪ್‌| ಚೀನಾ ಸ್ಪರ್ಧಿಗಳ ಎದುರು ಡ್ರಾ ಸಾಧಿಸಿದ ಹಂಪಿ, ದಿವ್ಯಾ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 0:39 IST
Last Updated 23 ಜುಲೈ 2025, 0:39 IST

ಕೋನೇರು ಹಂಪಿ

ಕೋನೇರು ಹಂಪಿ

ಬಟುಮಿ (ಜಾರ್ಜಿಯಾ): ಅನುಭವಿ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಅವರು ಫಿಡೆ ಮಹಿಳಾ ವಿಶ್ವ ಕಪ್‌ ಸೆಮಿಫೈನಲ್‌ ಪಂದ್ಯದ ಮೊದಲ ಕ್ಲಾಸಿಕಲ್ ಆಟದಲ್ಲಿ ಚೀನಾದ ಟಿಂಗ್ಜಿ ಲೀ ಎದುರು ಮಂಗಳವಾರ ಹೆಚ್ಚು ಪ್ರಯಾಸ ವಿಲ್ಲದೇ ಡ್ರಾ ಮಾಡಿಕೊಂಡರು.

ADVERTISEMENT

ಇನ್ನೊಂದು ಸೆಮಿಫೈನಲ್‌ನಲ್ಲಿ ದಿವ್ಯಾ ದೇಶಮುಖ್ ಅವರ ಪ್ರಬಲ ರಕ್ಷಣೆಯ ಆಟದೆದುರು ಮಾಜಿ ವಿಶ್ವ ಚಾಂಪಿಯನ್‌ ಝೊಂಗ್ವಿ ತಾನ್ ಅವರಿಗೆ ಹೆಚ್ಚೇನೂ ಸಾಧಿಸಲಾಗಲಿಲ್ಲ.

ಸೆಮಿಫೈನಲ್‌ ಆಡುತ್ತಿರುವ ನಾಲ್ವರಲ್ಲಿ ಭಾರತದ ಮತ್ತು ಚೀನಾದ ತಲಾ ಇಬ್ಬರು ಆಟಗಾರ್ತಿಯರಿದ್ದು, ಮಹಿಳಾ ಚೆಸ್‌ನಲ್ಲಿ ಏಷ್ಯಾದ ಪ್ರಾಬಲ್ಯ ಸಾಬೀತುಪಡಿಸಿದೆ.

ಈ ವಿಶ್ವಕಪ್ ಸುಮಾರು ₹6 ಕೋಟಿ ಬಹುಮಾನ ಹೊಂದಿದೆ.

ಇದು ಭಾರತದ ಆಟಗಾರ್ತಿಯರಿಗೆ ಉತ್ತಮ ಆರಂಭ ಎನಿಸಿದೆ. ಇಬ್ಬರೂ ಕಪ್ಪು ಕಾಯಿಗಳಲ್ಲಿ ಆಡಿದ್ದರು. ಬುಧವಾರ ಮರು ಪಂದ್ಯದಲ್ಲಿ ಇಬ್ಬರೂ ಬಿಳಿ ಕಾಯಿಗಳಲ್ಲಿ ಆಡಲಿದ್ದಾರೆ. ಇದು ಡ್ರಾ ಆದ ಪಕ್ಷದಲ್ಲಿ ವಿಜೇತರನ್ನು ನಿರ್ಧರಿಸಲು ಗುರುವಾರ ಅಲ್ಪಾವಧಿಯ ಟೈಬ್ರೇಕ್‌ ಪಂದ್ಯಗಳನ್ನು ಆಡಲಾಗುವುದು.

ಮೊದಲ ಮೂರು ಸ್ಥಾನ ಪಡೆದವರು ಮುಂದಿನ ವರ್ಷದ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆಯುವರು. ಕಡೇಪಕ್ಷ ಭಾರತದ ಒಬ್ಬರು ಅರ್ಹತೆ ಪಡೆಯುವುದು ಖಚಿತವಾಗಿದೆ.

ಅನುಭವಿ ಝೊಂಗ್ವಿ ಅವರಿಗೆ ದಿವ್ಯಾ ಅವರ ಓಪನಿಂಗ್‌ನಲ್ಲಿ ಹುಳುಕುಗಳು ಕಾಣಲಿಲ್ಲ. ಇಬ್ಬರೂ ಎಕ್ಸ್‌ಚೇಂಜ್‌ಗಳಿಗೆ ಹೋದರು. 30 ನಡೆಗಳ ನಂತರ ಆಟ ಡ್ರಾ ಆಯಿತು.

ಹಂಪಿ ಅವರು ವಿಭಿನ್ನ ಓಪನಿಂಗ್ ಮೂಲಕ ಚೀನಾ ಟಿಂಗ್ಜಿ ಅವರನ್ನು ಅಚ್ಚರಿಗೆ ಕೆಡವಿದರು. ಮಧ್ಯಮ ಹಂತದ ನಂತರ ಇಬ್ಬರೂ ಕ್ವೀನ್‌ಗಳನ್ನು ಕಳೆದುಕೊಂಡರು. ಕೊನೆಗೆ ಭಿನ್ನ ಬಣ್ಣದ ಬಿಷಪ್‌ಗಳು ಉಳಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.