ADVERTISEMENT

ಸಿಗದ ವೀಸಾ: ಚೆಸ್‌ ಸ್ಪರ್ಧಿಗಳ ಪ್ರಯಾಣ ವಿಳಂಬ ಸಾಧ್ಯತೆ

ಪಿಟಿಐ
Published 17 ಸೆಪ್ಟೆಂಬರ್ 2023, 13:31 IST
Last Updated 17 ಸೆಪ್ಟೆಂಬರ್ 2023, 13:31 IST
Chess.(photo:@aicfchess)
Chess.(photo:@aicfchess)   

ಚೆನ್ನೈ: ಮೆಕ್ಸಿಕೊ ಸಿಟಿಯಲ್ಲಿ ನಡೆಯಲಿರುವ ಫಿಡೆ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಭಾರತದ ಕೆಲವು ಸ್ಪರ್ಧಿಗಳಿಗೆ ವೀಸಾ ಲಭಿಸದ ಕಾರಣ ಪ್ರಯಾಣ ವಿಳಂಬವಾಗುವ ಸಾಧ್ಯತೆಯಿದೆ.

ಭಾರತದ ಸ್ಪರ್ಧಿಗಳು ಸೋಮವಾರ ಮೆಕ್ಸಿಕೊಗೆ ಪ್ರಯಾಣ ಬೆಳೆಸಲಿದ್ದು, ಭಾನುವಾರದವರೆಗೂ ಕೆಲವರಿಗೆ ವೀಸಾ ಲಭಿಸಿಲ್ಲ. ಟೂರ್ನಿ ಬುಧವಾರ ಆರಂಭವಾಗಲಿದೆ.

‘ಸ್ಪರ್ಧಿಗಳ ಪ್ರಯಾಣಕ್ಕೆ ಭಾರತ ಸರ್ಕಾರ ಅನುಮತಿ ನೀಡಿದೆ. ಆದರೆ ಮೆಕ್ಸಿಕೊ ರಾಯಭಾರ ಕಚೇರಿಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇದರಿಂದ ವೀಸಾ ಲಭಿಸುವುದು ವಿಳಂಬವಾಗಿದೆ’ ಎಂದು ಫಿಡೆ ಸಲಹಾ ಮಂಡಳಿ ಮುಖ್ಯಸ್ಥ ಭರತ್‌ ಸಿಂಗ್‌ ಚೌಹಾನ್ ಹೇಳಿದ್ದಾರೆ.

ADVERTISEMENT

‘ಭಾರತ ತಂಡವು ಸೋಮವಾರ ಪ್ರಯಾಣ ಬೆಳೆಸಲಿದೆ. ಆದರೆ ಕೊನೆಯ ದಿನದವರೆಗೂ (ಭಾನುವಾರ) ವೀಸಾ ಲಭಿಸಿಲ್ಲ. ನಿಗದಿತ ಅವಧಿಯೊಳಗೆ ವೀಸಾ ಲಭಿಸುವ ಖಚಿತತೆಯೂ ಇಲ್ಲ’ ಎಂದು ಅಸಮಾಧಾನ ಹೊರಹಾಕಿದ್ಧಾರೆ.

ವೃಶಾಂಕ್‌ ಚೌಹಾನ್, ಅರುಣ್‌ ಕಟಾರಿಯ, ಭಾಗ್ಯಶ್ರೀ ಪಾಟೀಲ್, ಪ್ರಣೀತ್ ವಿ., ಫೆಮಿಲ್ ಚೆಲ್ಲದುರೈ ಮತ್ತು ಕೋಚ್‌ಗಳಾದ ಪ್ರವೀಣ್‌ ತಿಪ್ಸೆ ಹಾಗೂ ಕಿರಣ್‌ ಅಗರವಾಲ್‌ ಅವರಿಗೆ ಇನ್ನೂ ವೀಸಾ ಲಭಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.