ADVERTISEMENT

ಪ್ರೊ ಲೀಗ್ ಹಾಕಿ: ಭಾರತ–ಅಮೆರಿಕ ಪೈಪೋಟಿ ಇಂದು

ಮೊದಲ ಗೆಲುವಿನ ಗುರಿ

ಪಿಟಿಐ
Published 8 ಫೆಬ್ರುವರಿ 2024, 13:42 IST
Last Updated 8 ಫೆಬ್ರುವರಿ 2024, 13:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭುವನೇಶ್ವರ: ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟಿರುವ ಭಾರತದ ಮಹಿಳಾ ಹಾಕಿ ತಂಡ ಈಗ ಆ ಸರಣಿಯನ್ನು ಕಡಿದುಹಾಕುವ ತವಕದಲ್ಲಿದ್ದೆ. ಆತಿಥೇಯ ತಂಡ ಶುಕ್ರವಾರ ಇಲ್ಲಿ ನಡೆಯುವ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾದ ಸವಿತಾ ಪೂನಿಯಾ ಬಳಗದ ಪ್ರದರ್ಶನ ಇತ್ತೀಚಿನ ದಿನಗಳಲ್ಲಿ ಸಾಧಾರಣ ಮಟ್ಟದಿಂದ ಅಧೋಗತಿಯತ್ತ ಸಾಗಿದೆ.

ADVERTISEMENT

ಚೀನಾಕ್ಕೆ 1–2 ಗೋಲುಗಳಿಂದ ಮಣಿದಿದ್ದ ಭಾರತ ನಂತರ ಪ್ರಬಲ ನೆದರ್ಲೆಂಡ್ಸ್ ತಂಡದೆದುರು 1–3ರಿಂದ ಸೋಲನುಭವಿಸಿತ್ತು. ಬುಧವಾರ ಬಲಿಷ್ಠ ಆಸ್ಟ್ರೇಲಿಯಾಕ್ಕೆ 0–3 ಗೋಲುಗಳಿಂದ ಶರಣಾಗಿತ್ತು.

‘ನಮಗೆ ಆರಂಭಿಕ ಪಂದ್ಯಗಳು ಪ್ರಬಲ ಸವಾಲನ್ನು ಒಡ್ಡಿದವು. ಆದರೆ ನಮ್ಮದು ಪುಟಿದೇಳಬಲ್ಲ ತಂಡ. ಪ್ರತಿಯೊಂದು ಸೋಲು ನಮಲ್ಲಿ ದೃಢನಿರ್ಧಾರ, ಮರಳಿ ಹೋರಾಡಲು ಶಕ್ತಿ ತುಂಬಿವೆ’ ಎಂದು ನಾಯಕಿ ಸವಿತಾ ಹೇಳಿದರು. ನಮ್ಮ ನೈಜ ಸಾಮರ್ಥ್ಯ ಪ್ರದರ್ಶಿಸಿ, ಮೊದಲ ಗೆಲುವು ದಾಖಲಿಸಲು ಶುಕ್ರವಾರದ ಪಂದ್ಯ ಅವಕಾಶ ಎಂದೂ ಹೇಳಿದರು.

ಅಮೆರಿಕ ತಂಡವೂ ಹಿನ್ನಡೆಯಿಂದಲೇ ಲೀಗ್ ಆರಂಭಿಸಿದೆ. ನೆದರ್ಲೆಂಡ್ಸ್‌ ಕೈಲಿ 0–7 ಅಂತರದ ಭಾರಿ ಸೋಲು ಅನುಭವಿಸಿದ ನಂತರ, ಆ ತಂಡ 0–3 ಗೋಲುಗಳಿಂದ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು. ಚೀನಾ ತಂಡವೂ 3–1 ಗೋಲುಗಳಿಂದ ಅಮೆರಿಕ ಮೇಲೆ ಜಯಗಳಿಸಿದೆ. ಹೀಗಾಗಿ ಆ ತಂಡವೂ ಗೆಲುವಿಗಾಗಿ ತವಕದಿಂದ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.