ADVERTISEMENT

ಪ್ರೊ ಲೀಗ್‌ಗೆ ಪಾಕ್‌; ಭಾರತ ವಿರುದ್ಧ ಪಂದ್ಯ ತಟಸ್ಥ ತಾಣದಲ್ಲಿ

ಪಿಟಿಐ
Published 29 ಆಗಸ್ಟ್ 2025, 14:41 IST
Last Updated 29 ಆಗಸ್ಟ್ 2025, 14:41 IST
<div class="paragraphs"><p>ಪಾಕಿಸ್ತಾನ ಹಾಕಿ ತಂಡ</p></div>

ಪಾಕಿಸ್ತಾನ ಹಾಕಿ ತಂಡ

   

(ಚಿತ್ರ ಕೃಪೆ: X/X/@FIH_Hockey)

ನವದೆಹಲಿ: ಪುರುಷರ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿಯ ಏಳನೇ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ ಸೇರ್ಪಡೆಯಾಗಿದೆ. ಆದರೆ ಸಾಂಪ್ರದಾಯಿಕ ತವರು– ಎದುರಾಳಿ ದೇಶದಲ್ಲಿ ಆಡುವ ಮಾದರಿಯ ಬದಲು ಭಾರತ ತಂಡವನ್ನು ಅದು ತಟಸ್ಥ ತಾಣದಲ್ಲಿ ಎದುರಿಸಲಿದೆ.

ADVERTISEMENT

ಭಾರತ, ಪಾಕಿಸ್ತಾನ ತಂಡಗಳ ಜೊತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಇಂಗ್ಲೆಂಡ್‌, ಜರ್ಮನಿ, ನೆದರ್ಲೆಂಡ್ಸ್‌ ಮತ್ತು ಸ್ಪೇನ್‌ ತಂಡಗಳೂ ಮುಂಬರುವ ಋತುವಿನ ಪ್ರೊ ಲೀಗ್‌ನಲ್ಲಿ ಆಡಲಿವೆ. ವೇಳಾಪಟ್ಟಿ ಅಂತಿಮಗೊಳ್ಳಬೇಕಿದೆ.

ಪಾಕಿಸ್ತಾನ ತಂಡ ಎಫ್‌ಐಎಚ್‌ ಹಾಕಿ ನೇಷನ್ಸ್ ಕಪ್ ಮೂಲಕ ಅರ್ಹತೆ ಪಡೆಯಿತು. ಈ ವರ್ಷದ ಆರಂಭದಲ್ಲಿ ಮಲೇಷ್ಯಾದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಆದರೆ ‘ಪ್ರೊ ಲೀಗ್‌ಗೆ ಸೇರ್ಪಡೆಯಾಗುವಂತೆ ನೀಡಿದ ಆಹ್ವಾನದ ಪ್ರಕಾರ ಮುಂದುವರಿಯಲಾಗದು’ ಎಂದು ನ್ಯೂಜಿಲೆಂಡ್ ಹೇಳಿತ್ತು. ಹೀಗಾಗಿ ರನ್ನರ್ ಅಪ್ ಆದ ಪಾಕಿಸ್ತಾನಕ್ಕೆ ಅವಕಾಶ ದೊರೆಯತು.

ಪಾಕಿಸ್ತಾನದ ಜೊತೆ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವುದಿಲ್ಲ ಎಂದು ಕ್ರೀಡಾನೀತಿಯಲ್ಲಿ ಭಾರತ ತಿಳಿಸಿತ್ತು. ಆದರೆ ಒಳಗೊಳ್ಳುವಿಕೆಯ  ಒಲಿಂಪಿಕ್‌ ಆದರ್ಶಕ್ಕೆ ಅನುಗುಣವಾಗಿ ಬಹುತಂಡಗಳ ಟೂರ್ನಿಯಲ್ಲಿ ಆಡಲು ವಿನಾಯಿತಿ ನೀಡುವುದಾಗಿ ತಿಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.