ADVERTISEMENT

ಭಾರತ ಹಾಕಿ ತಂಡದ ಮಾಜಿ ಆಟಗಾರ ಉಸ್ಮಾನ್ ಖಾನ್ ನಿಧನ

ಪಿಟಿಐ
Published 4 ಜೂನ್ 2021, 15:11 IST
Last Updated 4 ಜೂನ್ 2021, 15:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ, ಭಾರತ ಹಾಕಿ ತಂಡದ ಮಾಜಿ ಆಟಗಾರ ಉಸ್ಮಾನ್ ಖಾನ್ (76) ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಿಧನರಾದರು. ಹಾಕಿ ಇಂಡಿಯಾ ಶುಕ್ರವಾರ ಈ ವಿಷಯ ತಿಳಿಸಿದೆ. ಅವರಿಗೆ ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.

‘ಮಾಜಿ ಆಟಗಾರ ಉಸ್ಮಾನ್ ಖಾನ್‌ ನಿಧನದ ಸುದ್ದಿ ಕೇಳಿ ತುಂಬ ದುಃಖವಾಗಿದೆ. ಲೆಫ್ಟ್‌ ವಿಂಗ್‌ನಲ್ಲಿ ಅವರು ಸೊಗಸಾದ ಆಟಗಾರನಾಗಿದ್ದರು‘ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೆಂದ್ರೊ ನಿಂಗೊಂಬಮ್ ಕಂಬನಿ ಮಿಡಿದಿದ್ದಾರೆ.

ಚೆನ್ನೈನಲ್ಲಿ ಕಸ್ಟಮ್ಸ್ ಆಯುಕ್ತರಾಗಿದ್ದ ಖಾನ್‌, ಅಲ್ಲಿಂದ ಕೋಲ್ಕತ್ತಕ್ಕೆ ತೆರಳಿ ಅದೇ (ಕಸ್ಟಮ್ಸ್) ತಂಡವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಬಂಗಾಳ ತಂಡದ ಪರ ಹಲವು ವರ್ಷಗಳ ಕಾಲ ಆಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.