ADVERTISEMENT

ಟಾಪ್‌ ಯೋಜನೆಗೆ ನಾಲ್ವರು ಬಾಕ್ಸರ್‌ಗಳು ಆಯ್ಕೆ

ಪಿಟಿಐ
Published 30 ನವೆಂಬರ್ 2020, 12:09 IST
Last Updated 30 ನವೆಂಬರ್ 2020, 12:09 IST
ಪೂಜಾ ರಾಣಿ–ಪಿಟಿಐ ಚಿತ್ರ
ಪೂಜಾ ರಾಣಿ–ಪಿಟಿಐ ಚಿತ್ರ   

ನವದೆಹಲಿ : ಟೋಕಿಯೊ ಒಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸಿರುವ ಭಾರತದ ಬಾಕ್ಸರ್‌ಗಳಾದ ಸಿಮ್ರನ್‌ಜೀತ್‌ ಕೌರ್‌, ಪೂಜಾ ರಾಣಿ, ಆಶಿಶ್ ಕುಮಾರ್‌ ಹಾಗೂ ಸತೀಶ್‌ ಕುಮಾರ್‌ ಅವರು ಕ್ರೀಡಾ ಸಚಿವಾಲಯದ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಗೆ (ಟಾಪ್ಸ್) ಸೇರ್ಪಡೆಗೊಂಡಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ ಸೋಮವಾರ ಈ ವಿಷಯ ತಿಳಿಸಿದೆ.

60 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಸಿಮ್ರನ್‌ಜೀತ್‌ ಕೌರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದವರು. ಪೂಜಾ ರಾಣಿ 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ.

75 ಕೆಜಿ ವಿಭಾಗದಲ್ಲಿ ಸೆಣಸಾಟ ನಡೆಸುವ ಆಶಿಶ್‌ ಕುಮಾರ್‌ ಹಾಗೂ ಸತೀಶ್‌ ಕುಮಾರ್‌ (+91 ಕೆಜಿ) ಅವರು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದರು.

ADVERTISEMENT

ಮೇರಿ ಕೋಮ್‌, ಲವ್ಲಿನಾ ಬೊರ್ಗೊಹೈನ್‌, ಕವಿಂದರ್‌ ಸಿಂಗ್‌ ಬಿಷ್ತ್‌, ಅಮಿತ್‌ ಪಂಗಲ್‌ (52 ಕೆಜಿ), ಮನೀಷ್‌ ಕೌಶಿಕ್‌ (63 ಕೆಜಿ) ಹಾಗೂ ವಿಕಾಸ್‌ ಕೃಷ್ಣನ್‌ ಅವರು ಈಗಾಗಲೇ ಟಾಪ್ಸ್ ಯೋಜನೆಯಲ್ಲಿದ್ದಾರೆ.

ನಿಖತ್‌ ಜರೀನ್‌ (51 ಕೆಜಿ) ಹಾಗೂ ಸೋನಿಯಾ ಚಾಹಲ್‌ (57 ಕೆಜಿ) ಹಾಗೂ ಶಿವ ಥಾಪಾ(63 ಕೆಜಿ) ಅವರು ಟಾಪ್‌ ಯೋಜನೆಯ ಡೆವಲಪ್‌ಮೆಂಟ್‌ ಗುಂಪಿನಲ್ಲಿದ್ದಾರೆ.

ಮೇರಿ ಕೋಮ್‌ ಸ್ಪರ್ಧಿಸುವ 51 ಕೆಜಿ ವಿಭಾಗದಲ್ಲೇ ಜರೀನ್ ಕೂಡ ಸ್ಪರ್ಧಿಸುತ್ತಾರೆ. 63 ಕೆಜಿ ವಿಭಾಗದ ಸ್ಥಾನಕ್ಕಾಗಿ ಮನೀಷ್‌ ಕೌಶಿಕ್‌ ಜೊತೆ ಶಿವ ಪೈಪೋಟಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.