ADVERTISEMENT

ರಾಜ್ಯ ರ‍್ಯಾಂಕಿಂಗ್ ಟಿಟಿ: ಗೌರವ್‌, ತನಿಷ್ಕಾಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 21:30 IST
Last Updated 31 ಆಗಸ್ಟ್ 2024, 21:30 IST
ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ‌ ಬಾಲಕರ ಮತ್ತು ಬಾಲಕಿಯರ 15 ವರ್ಷದೊಳಗಿನವರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಗೌರವ್ ಗೌಡ (ಎಡ) ಮತ್ತು ತನಿಷ್ಕಾ ಕಪಿಲ್ ಕಾಲಭೈರವ್
ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ‌ ಬಾಲಕರ ಮತ್ತು ಬಾಲಕಿಯರ 15 ವರ್ಷದೊಳಗಿನವರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಗೌರವ್ ಗೌಡ (ಎಡ) ಮತ್ತು ತನಿಷ್ಕಾ ಕಪಿಲ್ ಕಾಲಭೈರವ್   

ಬೆಂಗಳೂರು: ಗೌರವ್ ಗೌಡ ಮತ್ತು ತನಿಷ್ಕಾ ಕಪಿಲ್ ಕಾಲಭೈರವ್ ಅವರು ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ‌ ಬಾಲಕರ ಮತ್ತು ಬಾಲಕಿಯರ 15 ವರ್ಷದೊಳಗಿನವರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಶನಿವಾರ ಬೆಳಗಾವಿಯಲ್ಲಿ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಗೌರವ್ 11-6, 6-11, 11-8, 11-2ರಲ್ಲಿ ರೇಯಾನ್ಶ್ ಜಲನ್‌ರನ್ನು ಸೋಲಿಸಿದರು.

ತನಿಷ್ಕಾ ಅವರು 13-11, 11-6, 11-5ರಲ್ಲಿ ಹಿಯಾ ಸಿಂಗ್ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ADVERTISEMENT

ಇದಕ್ಕೂ ಮೊದಲು, ಸೆಮಿಫೈನಲ್‌ನಲ್ಲಿ ತನಿಷ್ಕಾ ಅವರು 11-7, 11-6, 11-6 ಅಂತರದಲ್ಲಿ ರಾಶಿ ವಿ. ರಾವ್ ವಿರುದ್ಧ ಗೆಲುವು ಸಾಧಿಸಿದರು.

ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಗೌರವ್ 11-6, 11-13, 11-6, 9-11, 11-7ರಿಂದ ಶುಭಂ ತ್ರಿವೇದಿ ಅವರನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.