ADVERTISEMENT

ಬ್ಯಾಸ್ಕೆಟ್‌ಬಾಲ್‌: ಜರ್ಮನಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 16:10 IST
Last Updated 10 ಸೆಪ್ಟೆಂಬರ್ 2023, 16:10 IST
ಬ್ಯಾಸ್ಕೆಟ್‌ಬಾಲ್‌
ಬ್ಯಾಸ್ಕೆಟ್‌ಬಾಲ್‌   

ಮನಿಲಾ (ಎಎಫ್‌ಪಿ): ಫೈನಲ್‌ನಲ್ಲಿ ಸರ್ಬಿಯಾ ತಂಡವನ್ನು 83–77 ಪಾಯಿಂಟ್ಸ್‌ಗಳಿಂದ ಮಣಿಸಿದ ಜರ್ಮನಿ ತಂಡ, ಇದೇ ಮೊದಲ ಬಾರಿ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಕಿರೀಟ ಮುಡಿಗೇರಿಸಿಕೊಂಡಿತು.

ಭಾನುವಾರ ನಡೆದ ಪಂದ್ಯದಲ್ಲಿ ಡೆನಿಸ್ ಶ್ರೋಡೆರ್ (28 ಪಾಯಿಂಟ್ಸ್) ಮತ್ತು ಫ್ರಾನ್ಸ್ ವ್ಯಾಗ್ನೆರ್ (19) ಅವರು ಜರ್ಮನಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜರ್ಮನಿ ತಂಡ ಸೆಮಿಫೈನಲ್‌ನಲ್ಲಿ ಬಲಿಷ್ಠ ಅಮೆರಿಕಕ್ಕೆ ಆಘಾತ ನೀಡಿತ್ತು.

ಫೈನಲ್‌ ಪಂದ್ಯದ ವಿರಾಮದ ವೇಳೆಗೆ ಉಭಯ ತಂಡಗಳು 47–47 ರಿಂದ ಸಮಬಲ ಸಾಧಿಸಿದ್ದವು. ಮೂರನೇ ಕ್ವಾರ್ಟರ್‌ನಲ್ಲಿ 22–10ರ ಮೇಲುಗೈ ಪಡೆದ ಜರ್ಮನಿ, ಪಂದ್ಯವನ್ನು ತನ್ನತ್ತ ಸೆಳೆದುಕೊಂಡಿತು.

ADVERTISEMENT

ಕೆನಡಾಕ್ಕೆ ಕಂಚು: ಮೂರನೇ ಸ್ಥಾನಕ್ಕಾಗಿ ಪಡೆದ ಪಂದ್ಯದಲ್ಲಿ 127–118 ರಿಂದ ಅಮೆರಿಕ ತಂಡವನ್ನು ಮಣಿಸಿದ ಕೆನಡಾ ಕಂಚಿನ ಪದಕ ಗೆದ್ದುಕೊಂಡಿತು.

ಡಿಲೊನ್ ಬ್ರೂಕ್ಸ್ (39 ಪಾಯಿಂಟ್ಸ್) ಮತ್ತು ಶಾಯ್ ಗಿಲ್ಜಿಯಸ್ ಅಲೆಕ್ಸಾಂಡರ್ (31) ಅವರು ಕೆನಡಾ ತಂಡದ ಪರ ಮಿಂಚಿದರೆ, ಅಮೆರಿಕದ ಪರ ಆ್ಯಂಥನಿ ಎಡ್ವರ್ಡ್ಸ್ 24 ಪಾಯಿಂಟ್‌ ಗಳಿಸಿದರು.

2019ರಲ್ಲಿ ಚೀನಾದಲ್ಲಿ ನಡೆದ ಹಿಂದಿನ ವಿಶ್ವಕಪ್‌ನಲ್ಲಿ ಅಮೆರಿಕ ಏಳನೇ ಸ್ಥಾನ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.