ADVERTISEMENT

ಫಿಫಾ ಅಧ್ಯಕ್ಷರಾಗಿ ಇನ್ಫಾಂಟಿನೊ ಆಯ್ಕೆ

ಏಜೆನ್ಸೀಸ್
Published 17 ಮಾರ್ಚ್ 2023, 0:08 IST
Last Updated 17 ಮಾರ್ಚ್ 2023, 0:08 IST
ಇನ್ಫಾಂಟಿನೊ
ಇನ್ಫಾಂಟಿನೊ   

ಕಿಗಾಲಿ, ರುವಾಂಡ: ಸ್ವಿಟ್ಜರ್‌ಲೆಂಡ್‌ನ ಗಿಯಾನಿ ಇನ್ಫಾಂಟಿನೊ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ನ (ಫಿಫಾ) ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ಧಾರೆ.

ರುವಾಂಡದ ರಾಜಧಾನ ಕಿಗಾಲಿಯಲ್ಲಿ ಗುರುವಾರ ನಡೆದ ಫಿಫಾ ಮಹಾಸಭೆಯಲ್ಲಿ ಅವರ ಅವಿರೋಧ ಆಯ್ಕೆ ನಡೆದಿದ್ದು, 2027ರ ವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

52 ವರ್ಷದ ಇನ್ಫಾಂಟಿನೊ ಅವರು 2016 ರಲ್ಲಿ ಮೊದಲ ಬಾರಿ ಫಿಫಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸೆಪ್‌ ಬ್ಲಾಟರ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ತುಂಬಿದ್ದರು.

ADVERTISEMENT

ಫಿಫಾ ನಿಯಮದ ಪ್ರಕಾರ ಒಬ್ಬರಿಗೆ ತಲಾ ನಾಲ್ಕು ವರ್ಷಗಳ ಮೂರು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.