ADVERTISEMENT

ಅಮೆರಿಕನ್‌ ಗ್ಯಾಂಬಿಟ್ಸ್‌ಗೆ ‘ಫೈರ್ಸ್‌’ ಪ್ರಾಯೋಜಕತ್ವ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 16:13 IST
Last Updated 6 ನವೆಂಬರ್ 2025, 16:13 IST
ಬೆಂಗಳೂರಿನಲ್ಲಿ ಗುರುವಾರ, ಗ್ಲೋಬಲ್ ಚೆಸ್‌ ಲೀಗ್ ಫ್ರಾಂಚೈಸಿಯಾದ ಅಮೆರಿಕನ್ ಗ್ಯಾಂಬಿಟ್ಸ್‌ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಫ್ರಾಂಚೈಸಿಯ ಸಹ ಮಾಲಕ ಪಿ.ಪಿ.ಪ್ರಚುರಾ, ತಂಡದ ಪ್ರಧಾನ ಪ್ರಾಯೋಜಕರಾದ ಫೈರ್ಸ್‌ ಬ್ರೋಕರೇಜ್‌ನ ಸಿಇಒ ತೇಜಸ್‌ ಖೋಡೆ, ಹಿರಿಯ ಉಪಾಧ್ಯಕ್ಷ ಲಕ್ಕಿ ಸೈನಿ ಅವರು ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ, ಗ್ಲೋಬಲ್ ಚೆಸ್‌ ಲೀಗ್ ಫ್ರಾಂಚೈಸಿಯಾದ ಅಮೆರಿಕನ್ ಗ್ಯಾಂಬಿಟ್ಸ್‌ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಫ್ರಾಂಚೈಸಿಯ ಸಹ ಮಾಲಕ ಪಿ.ಪಿ.ಪ್ರಚುರಾ, ತಂಡದ ಪ್ರಧಾನ ಪ್ರಾಯೋಜಕರಾದ ಫೈರ್ಸ್‌ ಬ್ರೋಕರೇಜ್‌ನ ಸಿಇಒ ತೇಜಸ್‌ ಖೋಡೆ, ಹಿರಿಯ ಉಪಾಧ್ಯಕ್ಷ ಲಕ್ಕಿ ಸೈನಿ ಅವರು ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಗ್ಲೋಬಲ್‌ ಚೆಸ್‌ ಲೀಗ್‌ ಫ್ರಾಂಚೈಸಿಯಾದ ಅಮೆರಿಕನ್‌ ಗ್ಯಾಂಬಿಟ್ಸ್‌ ತಂಡಕ್ಕೆ ಬ್ರೋಕರೇಜ್‌ ಕಂಪನಿಯಾದ ಫೈರ್ಸ್‌, ಮೂರು ವರ್ಷಗಳ ಅವಧಿಗೆ ಪ್ರಧಾನ ಪ್ರಾಯೋಜಕತ್ವ ವಹಿಸಿದೆ. ಗುರುವಾರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಇದನ್ನು ಘೋಷಿಸಲಾಯಿತು.

ಇದರ ಭಾಗವಾಗಿ, ಅಮೆರಿಕನ್‌  ಗ್ಯಾಂಬಿಟ್ಸ್‌ನ ಸಹ-ಮಾಲಕ ಪ್ರಚುರಾ ಪಿ.ಪಿ., ಫೈರ್ಸ್‌ ಸಿಇಒ ಮತ್ತು ಸಹ-ಸಂಸ್ಥಾಪಕ ತೇಜಸ್‌ ಖೋಡೆ ಮತ್ತು ಹಿರಿಯ ಉಪಾಧ್ಯಕ್ಷ  ಮತ್ತು ಮಾರ್ಕೆಟಿಂಗ್‌ ಮುಖ್ಯಸ್ಥ ಲಕ್ಕಿ ಸೈನಿ ಅವರು ಅಮೆರಿಕನ್‌ ಗ್ಯಾಂಬಿಟ್ಸ್ ತಂಡದ ಅಧಿಕೃತ ಜರ್ಸಿಯನ್ನು ಅನಾವರಣಗೊಳಿಸಿದರು.

‘ನಾವು ಚೆಸ್‌ ಪ್ರೇಮಿಗಳು. ಈ ಆಟ ಪ್ರೋತ್ಸಾಹಿಸುವವರು. ಇತ್ತೀಚೆಗಷ್ಟೇ ಕಚೇರಿಯಲ್ಲಿ ಟೂರ್ನಿ ನಡೆದಿತ್ತು’ ಎಂದು ತೇಜಸ್‌ ಖೋಡೆ ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡರು. ವೃತ್ತಿಪರರಲ್ಲದಿದ್ದರೂ ಹವ್ಯಾಸಕ್ಕೆ ತೇಜಸ್‌ ಅವರು ಚೆಸ್‌ ಆಡುತ್ತಾರೆ ಎಂದು ಪ್ರಚುರಾ ಅವರು ಹೇಳಿದರು.

ADVERTISEMENT

ಗ್ಲೋಬಲ್ ಚೆಸ್‌ ಲೀಗ್‌ ಡಿಸೆಂಬರ್ 13ರಿಂದ ನಡೆಯಲಿದೆ. ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಗ್ಯಾಂಬಿಟ್ಸ್‌ ತಂಡದ ಸಹ ಮಾಲಕರಾಗಿದ್ದಾರೆ.

ತಂಡದಲ್ಲಿ ಭಾರತದ ಆಟಗಾರರಿಲ್ಲದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆಕ್ಷನ್‌ನಲ್ಲಿ ನಾವೂ ಭಾರತದ ಆಟಗಾರರನ್ನು ಪಡೆಯಲು ಪ್ರಯತ್ನಿಸಿದೆವು. ಆದರೆ ಬೇಡಿಕೆಯ ಪೈಪೋಟಿಯಲ್ಲಿ ನಮ್ಮ ಯತ್ನ ಕೈಗೂಡಲಿಲ್ಲ’ ಎಂದು ಪ್ರಚುರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.