ADVERTISEMENT

ಪ್ರೊ ಲೀಗ್‌ ಹಾಕಿ: ಭಾರತ ಜಯಭೇರಿ

ಪಿಟಿಐ
Published 6 ನವೆಂಬರ್ 2022, 19:30 IST
Last Updated 6 ನವೆಂಬರ್ 2022, 19:30 IST

ಭುವನೇಶ್ವರ: ಗೋಲ್‌ಕೀಪರ್‌ ಕೃಷ್ಣ ಬಹಾದೂರ್‌ ಪಾಠಕ್‌ ಅವರ ಮಿಂಚಿನ ಪ್ರದರ್ಶನದ ಬಲದಿಂದ ಭಾರತ ತಂಡ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್‌ ತಂಡವನ್ನು 3–1 ರಲ್ಲಿ ಮಣಿಸಿತು.

ಭಾನುವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2 ಗೋಲುಗಳಿಂದ ಸಮಬಲ ಸಾಧಿಸಿದ್ದವು.

ಶೂಟೌಟ್‌ನಲ್ಲಿ ಹರ್ಮನ್‌ಪ್ರೀತ್‌, ರಾಜ್‌ಕುಮಾರ್‌ ಪಾಲ್‌ ಮತ್ತು ಅಭಿಷೇಕ್‌ ಅವರು ಭಾರತದ ಪರ ಗೋಲು ಗಳಿಸಿದರು. ಸ್ಪೇನ್‌ ಪರ ಗೆರಾರ್ಡ್‌ ಕ್ಲೇಪ್ಸ್‌ ಮಾತ್ರ ಯಶ ಕಂಡರು.

ADVERTISEMENT

ಜೋಕಿನ್‌ ಮೆನಿನಿ, ರಫಾಯೆಲ್ ವಿಲಾಲೊಂಗ ಮತ್ತು ಮಾರ್ಕ್‌ ಮಿರಾಲೆಸ್‌ ಅವರ ಪ್ರಯತ್ನವನ್ನು ತಡೆದ ಗೋಲ್‌ಕೀಪರ್‌ ಪಾಠಕ್‌, ಗೆಲುವಿನ ರೂವಾರಿ ಎನಿಸಿಕೊಂಡರು.

ನಿಗದಿತ ಅವಧಿಯಲ್ಲಿ ಭಾರತ ತಂಡದ ಎರಡೂ ಗೋಲುಗಳನ್ನು ಹರ್ಮನ್‌ಪ್ರೀತ್‌ (12 ಹಾಗೂ 32ನೇ ನಿ.) ಗಳಿಸಿದರು. ಸ್ಪೇನ್‌ ತಂಡಕ್ಕೆ ಮಿರಾಲೆಸ್‌ (43 ನೇ ನಿ.) ಹಾಗೂ ಪಿಯರ್ ಅಮಾಟ್ (55ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಮೊದಲ ಲೆಗ್‌ನಲ್ಲಿ ಸ್ಪೇನ್‌ ಕೈಯಲ್ಲಿ 2–3 ರಲ್ಲಿ ಸೋತಿದ್ದ ಭಾರತ, ಮುಯ್ಯಿ ತೀರಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.