ADVERTISEMENT

ಯಶ್‌ಗೆ ಪ್ರಶಸ್ತಿ

ಪಿಟಿಐ
Published 24 ಫೆಬ್ರುವರಿ 2020, 18:08 IST
Last Updated 24 ಫೆಬ್ರುವರಿ 2020, 18:08 IST

ಮುಂಬೈ : ಯಶ್‌ ಫಡ್ತೆ, ಪ್ರತಿಷ್ಠಿತ ಫ್ರೆಂಚ್‌ ಜೂನಿಯರ್‌ ಸ್ಕ್ವಾಷ್‌ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಇದೇ 20ರಿಂದ 23ರವರೆಗೆ ಫ್ರಾನ್ಸ್‌ನ ಲಿಲ್ಲೆಯಲ್ಲಿ ಈ ಚಾಂಪಿಯನ್‌ಷಿಪ್‌ ನಡೆದಿತ್ತು.

ಮೊದಲ ಶ್ರೇಯಾಂಕ ಪಡೆದಿದ್ದ 18 ವರ್ಷದ ಫಡ್ತೆ, ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಜೆಕ್‌ ಗಣರಾಜ್ಯದ ಎರಡನೇ ಶ್ರೇಯಾಂಕದ ಆಟಗಾರ ಮ್ಯಾರೆಕ್‌ ಪನಾಚೆಕ್‌ ಅವರನ್ನು 10–12, 11–5, 11–4, 11–5ರಿಂದ ಸೋಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.