ADVERTISEMENT

ಬಾಕ್ಸಿಂಗ್‌: ಜ್ಯೋತಿಗೆ ಚಿನ್ನದ ‍ಪದಕ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 17:32 IST
Last Updated 15 ಸೆಪ್ಟೆಂಬರ್ 2018, 17:32 IST
ಜ್ಯೋತಿ ಗುಲಿಯ
ಜ್ಯೋತಿ ಗುಲಿಯ   

ನವದೆಹಲಿ: ಭಾರತದ ಜ್ಯೋತಿ ಗುಲಿಯ ಅವರು ಪೊಲೆಂಡ್‌ನಲ್ಲಿ ನಡೆಯುತ್ತಿರುವ ಸಿಲೆಸಿಯನ್‌ ಓಪನ್‌ ಮಹಿಳಾ ಬಾಕ್ಸಿಂಗ್‌ ಟೂರ್ನಿಯ ಯೂತ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಜ್ಯೋತಿ, ಪೊಲೆಂಡ್‌ನ ಟಟಿಯಾನಾ ಪ್ಲುಟಾ ಅವರನ್ನು ಮಣಿಸಿದರು.

ಸೀನಿಯರ್‌ ಮಹಿಳೆಯರ 60 ಕೆ. ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಅನುಭವಿ ಬಾಕ್ಸರ್‌ ಎಲ್‌. ಸರಿತಾ ದೇವಿ, 0–5ರಿಂದ ಕಜಕಸ್ತಾನದ ಕರಿನಾ ಇಬ್ರಾಗಿವೊಮಾ ಎದುರು ಸೋತರು. ಇದರೊಂದಿಗೆ ಕಂಚಿನ ಪದಕ ಪಡೆದರು.

ADVERTISEMENT

69 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಲ‌ವ್ಲಿನಾ ಬೊರ್ಗೊಹೇನ್‌ ಮತ್ತು 81 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ರಾಣಿ ಅವರೂ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.