ADVERTISEMENT

ಗವರ್ನರ್ಸ್‌ ಕಪ್‌ ಗಾಲ್ಫ್‌: ಬಸವರಾಜ್‌ ಚಾಂಪಿಯನ್‌

ಗವರ್ನರ್ಸ್‌ ಕಪ್‌ ಗಾಲ್ಫ್‌ ಪ್ರಶಸ್ತಿ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:19 IST
Last Updated 2 ಜೂನ್ 2019, 19:19 IST
ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ಗವರ್ನರ್ಸ್ ಕಪ್ ಗಾಲ್ಫ್ ಟೂರ್ನಿಯ ವಿಜೇತರಿಗೆ ರಾಜ್ಯಪಾಲ ವಾಜುಭಾಯಿ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಿದರು (ಎಡದಿಂದ) ಕುಳಿತವರು: ರವಿ ಕುಮಾರ್ ರಾಜ್ (ಬಿಜಿಸಿ ಸಮಿತಿ ಸದಸ್ಯ), ಕ್ಯಾಪ್ಟನ್ ಶಿವಪ್ರದೀಪ್, ಸಂಜಯ್ ಎ.ಪೋಳ್ (ಕಾರ್ಯದರ್ಶಿ ), ಡಿ.ಎನ್. ವಸಂತ್ ಕುಮಾರ್ (ಖಜಾಂಚಿ). ನಿಂತಿರುವವರು: ಧನಲಕ್ಷ್ಮೀ ರೈಸ್, ನೀರಜ್ ಮಿತ್ತಲ್, ಕಿಶೋರ್ ರೆಡ್ಡಿ, ವೃಷಾಂಕ್ ಬಾಲು, ಜಿ.ಎನ್.ಬಸವರಾಜ್, ಸಿ.ಸುಂದರ್, ಅನುಷ್ಕಾ ಬೊರ್ಕರ್, ಲೋಕೇಶ್ ಕೃಷ್ಣ, ಸುನಿಲ್ ವಸಂತ್, ಶಶಿ ಕುಮಾರ್‌ –ಪ್ರಜಾವಾಣಿ ಚಿತ್ರ

ಬೆಂಗಳೂರು: ಜಿ.ಎನ್. ಬಸವರಾಜ್ ಅವರು ಗವರ್ನರ್ಸ್ ಕಪ್‌ ಗಾಲ್ಫ್‌ ಟೂರ್ನಿಯ ಮುಕ್ತ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರನ್ನರ್‌ ಅಪ್‌ ಸ್ಥಾನವನ್ನು ವೃಶಾಂಕ್‌ ಬಾಲು ಪಡೆದುಕೊಂಡರು. ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ಹ್ಯಾಂಡಿಕ್ಯಾಪ್‌ 0–9 ವಿಭಾಗದಲ್ಲಿ ಸಿ. ಸುಂದರ್‌ ಪ್ರಥಮ ಸ್ಥಾನ ಗಳಿಸಿದರೆ, ಧ್ರುವ ಜೌಹಾರಿ ದ್ವಿತೀಯ ಸ್ಥಾನ ಪಡೆದರು. ಹ್ಯಾಂಡಿಕ್ಯಾಪ್‌ 10–18 ವಿಭಾಗದ ಮೊದಲ ಸ್ಥಾನ ನೀರಜ್‌ ಮಿತ್ತಲ್‌ ಅವರಿಗೆ ಒಲಿಯಿತು. ಸುನಿಲ್‌ ವಸಂತ್‌ ದ್ವಿತೀಯ ಎರಡನೇ ಸ್ಥಾನ ಪಡೆದರು. ಹ್ಯಾಂಡಿಕ್ಯಾಪ್‌ 19–24 ವಿಭಾಗದಲ್ಲಿ ಲೋಕೇಶ್‌ ಕೃಷ್ಣ ಹಾಗೂ ಕಿಶೋರ್ ರೆಡ್ಡಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು.

ADVERTISEMENT

ಮಹಿಳೆಯರ ಗ್ರಾಸ್‌ ವಿಭಾಗದಲ್ಲಿ ಅನುಷ್ಕಾ ಬೊರ್ಕರ್‌ , ನೆಟ್‌ ವಿಭಾಗದಲ್ಲಿ ಧನಲಕ್ಷ್ಮೀ ಪ್ರಶಸ್ತಿ ಗೆದ್ದರು..

ರಾಜ್ಯಪಾಲ ವಜೂಭಾಯಿ ವಾಲಾ ಪ್ರಶಸ್ತಿ ವಿತರಿಸಿ ಮಾತನಾಡಿದರು. ಟೂರ್ನಿಯ ನಿರ್ದೇಶಕ ರವಿಕುಮಾರ್‌ ರಾಜು, ಕಾರ್ಯದರ್ಶಿ ಸಂಜಯ್‌ ಪೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.