ADVERTISEMENT

ಗಾಲ್ಫ್‌: ಮುನ್ನಡೆಯಲ್ಲಿ ಲಾರ್ಸ್‌ ವಾನ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 19:05 IST
Last Updated 30 ಮಾರ್ಚ್ 2023, 19:05 IST
ಲಾರ್ಸ್‌ ವಾನ್‌ ಮೆಯೆಲ್‌ –ಪ್ರಜಾವಾಣಿ ಚಿತ್ರ/ ಬಿ.ಎಚ್‌.ಶಿವಕುಮಾರ್
ಲಾರ್ಸ್‌ ವಾನ್‌ ಮೆಯೆಲ್‌ –ಪ್ರಜಾವಾಣಿ ಚಿತ್ರ/ ಬಿ.ಎಚ್‌.ಶಿವಕುಮಾರ್   

ಬೆಂಗಳೂರು: ನಿಖರ ಪ್ರದರ್ಶನ ನೀಡಿದ ನೆದರ್ಲೆಂಡ್ಸ್‌ನ ಲಾರ್ಸ್‌ ವಾನ್‌ ಮೆಯೆಲ್‌ ಅವರು ಇಲ್ಲಿ ನಡೆಯುತ್ತಿರುವ ದಿ ಚಾಲೆಂಜ್‌ ಗಾಲ್ಫ್‌ ಟೂರ್ನಿಯ ಮೂರನೇ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕ ಗಾಲ್ಫ್‌ ಸಂಸ್ಥೆ ಕೋರ್ಸ್‌ನಲ್ಲಿ ಗುರುವಾರ ಅವರು 67 ಸ್ಟ್ರೋಕ್‌ಗಳಲ್ಲಿ ಸ್ಪರ್ಧೆ ಕೊನೆ ಗೊಳಿಸಿದರು. ಈ ಮೂಲಕ ಒಟ್ಟಾರೆ 199 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಮೊದಲ ಎರಡು ಸುತ್ತುಗಳಲ್ಲಿ ಅವರು ತಲಾ 66 ಸ್ಟ್ರೋಕ್‌ಗಳನ್ನು ತೆಗೆದುಕೊಂಡಿದ್ದರು.

ತಲಾ 201 ಸ್ಕೋರ್‌ ಹೊಂದಿರುವ ಇಂಗ್ಲೆಂಡ್‌ನ ಅಲೆಕ್ಸ್‌ ಫಿಟ್ಜ್‌ಪ್ಯಾಟ್ರಿಕ್‌ ಮತ್ತು ಸ್ವಿಟ್ಜರ್ಲೆಂಡ್‌ನ ಜೊಯೆಲ್ ಗಿರ್‌ಬ್ಯಾಕ್‌ ಅವರು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಇವರು ಕ್ರಮವಾಗಿ 71 ಹಾಗೂ 68 ಸ್ಟ್ರೋಕ್‌ಗಳನ್ನು ತೆಗೆದುಕೊಂಡರು.ಫ್ರಾನ್ಸ್‌ನ ಫ್ರೆಡೆರಿಕ್‌ ಲ್ಯಾಕ್ರೊಕ್ಸ್‌ ಮತ್ತು ಜರ್ಮನಿಯ ಮೈಕಲ್‌ ಹಿರ್ಮರ್ (202) ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ADVERTISEMENT

ಭಾರತದ ಕಾರ್ತಿಕ್‌ ಶರ್ಮಾ (203) ಬಳಿಕದ ಸ್ಥಾನ ಹೊಂದಿದ್ದಾರೆ. ಅವರು 70 ಸ್ಟ್ರೋಕ್‌ಗಳೊಂದಿಗೆ ಮೂರನೇ ಸುತ್ತಿನ ಸ್ಪರ್ಧೆಯನ್ನು ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.