ADVERTISEMENT

ಶ್ರವಣದೋಷವುಳ್ಳ ಅಥ್ಲೀಟ್‌ಗಳಿಗೆ ನೆರವು ನೀಡಿ: ಗೂಂಗಾ ಪೈಲ್ವಾನ್ ಮನವಿ

ಪಿಟಿಐ
Published 10 ನವೆಂಬರ್ 2021, 12:21 IST
Last Updated 10 ನವೆಂಬರ್ 2021, 12:21 IST
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕುಸ್ತಿಪಟು ವೀರೇಂದ್ರಸಿಂಗ್  –ಪಿಟಿಐ ಚಿತ್ರ
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕುಸ್ತಿಪಟು ವೀರೇಂದ್ರಸಿಂಗ್  –ಪಿಟಿಐ ಚಿತ್ರ   

ನವದೆಹಲಿ: ಶ್ರವಣದೋಷವುಳ್ಳವರ ವಿಭಾಗದ ಅಥ್ಲೀಟ್‌ಗಳಿಗೆ ಮಾನ್ಯತೆನೀಡಬೇಕು ಎಂದು ’ಗೂಂಗಾ ಪೈಲ್ವಾನ್‘ವೀರೇಂದ್ರಸಿಂಗ್ಯಾದವ್ ಅವರು ಹರಿಯಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕುಸ್ತಿಪಟು ಯಾದವ್ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಹರಿಯಾಣದ ಮುಖ್ಯಮಂತ್ರಿ ಮೋಹನಲಾಲ್ ಖಟ್ಟರ್ ಅವರೇ ನಾನಿವತ್ತು ಇಲ್ಲಿಯ ದೆಹಲಿ ಹರಿಯಾಣ ಭವನದ ಮುಂದಿನ ಪಾದಚಾರಿ ಮಾರ್ಗದಲ್ಲಿ ನಿಂತು ತಮಗೆ ಮನವಿ ಮಾಡುತ್ತಿದ್ದೇನೆ. ಶ್ರವಣದೋಷವುಳ್ಳ ಕ್ರೀಡಾಪಟುಗಳಿಗೂ ಮಾನ್ಯತೆ ನೀಡಬೇಕು. ಅಲ್ಲಿಯವರೆಗೂ ತಮ್ಮ ನಿವಾಸದ ಮುಂದೆ ಕುಳಿತಿರುತ್ತೇನೆ‘ ಎಂದರು.

ADVERTISEMENT

’ಕೇಂದ್ರ ಸರ್ಕಾರವೇ ನಮ್ಮ ವಿಭಾಗದ ಅಥ್ಲೀಟ್‌ಗಳಿಗೆ ಗೌರವ ಮತ್ತು ಮಾನ್ಯತೆ ನೀಡುತ್ತಿದೆ. ನೀವು ಏಯಾಗೆ ಕೊಡುತ್ತಿಲ್ಲ‘ ಎಂದೂ ಪ್ರಶ್ನಿಸಿದ್ದಾರೆ.

ಬೇರೆ ಪ್ಯಾರಾ ಅಥ್ಲೀಟ್‌ಗಳಿಗೆ ಪ್ರತ್ಯೇಕವಾದ ಸಂಸ್ಥೆಗಳಿಲ್ಲ. ಆದರೆ, ಶ್ರವಣದೋಷವುಳ್ಳ ಅಥ್ಲೀಟ್‌ಗಳಿಗಾಗಿ ಅಂತರರಾಷ್ಟ್ರೀಯ ಡೆಫ್ ಕ್ರೀಡಾ ಸಮಿತಿ (ಐಸಿಎಸ್‌ಡಿ) ಇದೆ. ಶ್ರವಣದೋಷವುಳ್ಳವರಿಗೆ ವಿಭಾಗದ ಕ್ರೀಡೆಗಳನ್ನು ಇದು ಆಯೋಜಿಸುತ್ತದೆ. ಡೆಫಿಲಿಂಪಿಕ್ಸ್‌ ಕೂಟಕ್ಕೆ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಮಾನ್ಯತೆ ಇದೆ. ಆದರೂ ಪ್ಯಾರಾಲಿಂಪಿಕ್ ಕೂಟಗಳಲ್ಲಿ ಶ್ರವಣದೋಷ ವಿಭಾಗದ ಅಥ್ಲೀಟ್‌ಗಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ.

ಯಾದವ್ ಪದ್ಮಶ್ರೀ ಸ್ವೀಕರಿಸಿದ ಚಿತ್ರವನ್ನು ಟ್ವೀಟ್ ಮಾಡಿರುವ ಹರಿಯಾಣ ಮುಖ್ಯಮಂತ್ರಿ ಖಟ್ಟರ್, ’ ಫ್ರೀಸ್ಟೈಲ್ ಪ್ಯಾರಾ ಕುಸ್ತಿಪಟುವಾಗಿರುವ ಹರಿಯಾಣದ ಹೆಮ್ಮೆಯ ಪುತ್ರ ವೀರೇಂದ್ರಸಿಂಗ್ ಪುರಸ್ಕೃತರಾಗಿರುವುದು ಸಂತಸದ ವಿಷಯ. ಅವರಿಗೆ ಹಾರ್ದಿಕವಾಗಿ ಶುಭ ಕೋರುತ್ತೇನೆ‘ ಎಂದು ಬರೆದಿದ್ದಾರೆ.

74 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಯಾದವ್, ಡೆಫಿಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಮತ್ತು ಒಂದು ಕಂಚಿನ ಪದಕ ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.