ADVERTISEMENT

ಉದ್ದೀಪನ ಮದ್ದು ನಿರೋಧಕ: ದೇಶದಲ್ಲೇ ಉತ್ಪಾದಿಸಲಿ: ಪಿ.ಟಿ ಉಷಾ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 18:38 IST
Last Updated 12 ಡಿಸೆಂಬರ್ 2025, 18:38 IST
ಪಿ.ಟಿ ಉಷಾ
ಪಿ.ಟಿ ಉಷಾ   

ನವದೆಹಲಿ: ಉದ್ದೀಪನ ಮ.ದ್ದು ಮುಕ್ತ ರಾಷ್ಟ್ರವನ್ನಾಗಿ ಭಾರತವನ್ನು ರೂಪಿಸುವ ಅಗತ್ಯವಿದ್ದು, ಉದ್ದೀಪನ ಮದ್ದು ನಿರೋಧಕ ಕಿಟ್‌ ಅನ್ನು ಭಾರತದಲ್ಲೇ ಉತ್ಪಾದಿಸಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆ ಪಿ.ಟಿ ಉಷಾ ಅವರು ಶುಕ್ರವಾರ ಆಗ್ರಹಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಮೇಕ್ ಇನ್‌ ಇಂಡಿಯಾ’ ಉಪಕ್ರಮದಡಿ ಉದ್ದೀಪನ ಮದ್ದು ನಿರೋಧಕ ಕಿಟ್‌ಗಳನ್ನು ದೇಶಿಯವಾಗಿ ಉತ್ಪಾದಿಸುವ ಅಗತ್ಯವಿದೆ’ ಎಂದರು.

‘ಭಾರತವು ಜಾಗತಿಕ ಮಟ್ಟದಲ್ಲಿ ಕ್ರೀಡೆಯ ಶಕ್ತಿ ಕೇಂದ್ರವಾಗಿದೆ. ನಮ್ಮ ಕ್ರೀಡಾಪಟುಗಳು ಅಡೆತಡೆಗಳನ್ನು ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದ‌ಕಗಳನ್ನು ಪಡೆದಿದ್ದಾರೆ ಮತ್ತು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಉದ್ದೀಪನ ಮದ್ದಿನ ಬಳಕೆಯು ನ್ಯಾಯಯುತ ಆಟ, ಕ್ರೀಡಾಳುಗಳ ಆರೋಗ್ಯ ಮತ್ತು ದೇಶದ ಘನತೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ತಿಳಿಸಿದರು.

ADVERTISEMENT

‘ಉದ್ದೀಪನ ಮದ್ದು ಪತ್ತೆ ಮಾಡುವ ಉತ್ತಮ ಗುಣಮಟ್ಟದ ಕಿಟ್‌ಗಳನ್ನು ಆಮದುಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಅಧಿಕ ವೆಚ್ಚ, ಪರೀಕ್ಷೆಯಲ್ಲಿ ವಿಳಂಬ ಮತ್ತು ಇತರ ಏಜೆನ್ಸಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.