ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಅವರು ಗುರುವಾರ ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಏಳನೇ ಸುತ್ತಿನ ಪಂದ್ಯದ ಬಳಿಕ ಸಮಾನ ಪಾಯಿಂಟ್ಸ್ ಗಳಿಸಿದ್ದ ಅರ್ಜುನ್ ಇರಿಗೇಶ್ ಅವರನ್ನು ಟೈ ಬ್ರೇಕರ್‌ನಲ್ಲಿ ಗುಕೇಶ್ ಮಣಿಸುವ ಮೂಲಕ ತವರಿನಲ್ಲೇ ಚಾಂಪಿಯನ್ ಆದರು.
ಅಂತಿಮ ಸುತ್ತಿನಲ್ಲಿ ಭಾರತದ ಪಿ. ಹರಿಕೃಷ್ಣ ಅವರೊಂದಿಗೆ ಡ್ರಾ ಸಾಧಿಸಿದ ಗುಕೇಶ್ 4.5 ಅಂಕ ಪಡೆದರು. ಅರ್ಜುನ್ ಅವರು ಕೊನೆಯ ಸುತ್ತಿನಲ್ಲಿ ಹಂಗರಿಯ ಸನನ್ ಸುಗಿರೋವ್ ಅವರನ್ನು ಸೋಲಿಸಿ, 4.5 ಅಂಕಗಳೊಂದಿಗೆ ಗುಕೇಶ್ ಜತೆ ಅಗ್ರಸ್ಥಾನಕ್ಕೆ ಏರಿದರು.
ನಂತರ ಟೈ ಬ್ರೇಕ್ ಸ್ಕೋರ್‌ನ ಆಧಾರದ ಮೇಲೆ ಗುಕೇಶ್ ಮೇಲುಗೈ ಸಾಧಿಸಿದರು. ಈ ಮೂಲಕ ಮುಂದಿನ ವರ್ಷದ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯುವ ಅವಕಾಶ ಹೆಚ್ಚಿಸಿಕೊಂಡರು.
ಅರ್ಜುನ್ ರನ್ನರ್ ಅಪ್ ಆದರೆ, ಹರಿಕೃಷ್ಣ ಮೂರನೇ ಸ್ಥಾನ ಪಡೆದರು. ಹೀಗಾಗಿ, ಮೊದಲ ಮೂರು ಸ್ಥಾನಗಳು ಭಾರತದ ಆಟಗಾರರಿಗೆ ದೊರೆತವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.