ADVERTISEMENT

ಟಾಟಾ ಸ್ಟೀಲ್ ಚೆಸ್‌ ಟೂರ್ನಿ: ಡ್ರಾ ಪಂದ್ಯದಲ್ಲಿ ಗುಕೇಶ್

ಪಿಟಿಐ
Published 25 ಜನವರಿ 2025, 14:36 IST
Last Updated 25 ಜನವರಿ 2025, 14:36 IST
<div class="paragraphs"><p>ಗುಕೇಶ್&nbsp; </p></div>

ಗುಕೇಶ್ 

   

ವಿಯ್ಕ್‌ ಆನ್‌ ಝೀ (ನೆದರ್ಲೆಂಡ್ಸ್): ವಿಶ್ವ ಚಾಂಪಿಯನ್ ಡಿ.ಗುಕೇಶ್, ಟಾಟಾ ಸ್ಟೀಲ್ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಜೊತೆ 64 ನಡೆಗಳ ನಂತರ ಡ್ರಾ ಮಾಡಿಕೊಂಡರು. ಅಬ್ದುಸತ್ತಾರೊವ್ ಜೊತೆ ಜಂಟಿಯಾಗಿ ಅಗ್ರಸ್ಥಾನದಲ್ಲಿರುವ ಭಾರತದ ಪ್ರಜ್ಞಾನಂದ ಇನ್ನೊಂದು ಪಂದ್ಯದಲ್ಲಿ ಚೀನಾದ ವೀ ಯಿ ಜೊತೆ ಪಾಯಿಂಟ್ ಹಂಚಿಕೊಂಡರು.

14 ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿಯಲ್ಲಿ ಪ್ರಜ್ಞಾನಂದ ಮತ್ತು ಅಬ್ದುಸತ್ತಾರೋವ್ ತಲಾ 4.5 ಪಾಯಿಂಟ್ಸ್ ಗಳಿಸಿದ್ದಾರೆ.‌ ಇವರ ಬೆನ್ನುಬಿದ್ದಿರುವ ಗುಕೇಶ್ (4) ಎರಡನೇ ಸ್ಥಾನದಲ್ಲಿದ್ದಾರೆ. ವರ್ಷದ ಈ ಮೊದಲ ಪ್ರಮುಖ ಟೂರ್ನಿಯಲ್ಲಿ ಇನ್ನೂ ಏಳು ಸುತ್ತಿನ ಪಂದ್ಯಗಳು ಬಾಕಿವುಳಿದಿವೆ.

ADVERTISEMENT

ರೌಂಡ್‌–ರಾಬಿನ್‌ ಲೀಗ್‌ನ ಆರನೇ ಸುತ್ತಿನಲ್ಲಿ ಒಂದು ಪಂದ್ಯದಲ್ಲಿ ಮಾತ್ರ ನಿರ್ಣಾಯಕ ಫಲಿತಾಂಶ ಬಂದು ಉಳಿದ ಆರು ಪಂದ್ಯಗಳು ಡ್ರಾ ಆದವು.

ಅರ್ಜುನ್ ಇರಿಗೇಶಿ (1.5) ಅವರು ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ (3) ಜೊತೆ ಡ್ರಾ ಮಾಡಿಕೊಂಡರು.

ಪಿ.ಹರಿಕೃಷ್ಣ, ಅಲೆಕ್ಸಿ ಸರನ (ಸರ್ಬಿಯಾ), ವ್ಲಾದಿಮಿರ್‌ ಫೆಡೊಸೀವ್‌ (ಸ್ಲೊವೇನಿಯಾ) ಅವರು ತಲಾ 3.5 ಪಾಯಿಂಟ್ಸ್ ಕಲೆಹಾಕಿದ್ದಾರೆ. ಲಿಯಾನ್ ಲ್ಯೂಕ್ ಮೆಂಡೋನ್ಸಾ, ಹಾಲೆಂಡ್‌ನ ಮ್ಯಾಕ್ಸ್ ವಾಲ್ಟರ್ಮನ್ ಜೊತೆ ಡ್ರಾ ಮಾಡಿಒಂಡರು. ಸರನ ಅವರು ಫೆಡೋಸಿವ್ ಅವರನ್ನು ಮಣಿಸಿದ್ದು ಮಾತ್ರ ದಿನದ ಏಕೈಕ ನಿರ್ಣಾಯಕ ಫಲಿತಾಂಶ ಎನಿಸಿತು.

ಚಾಲೆಂಜರ್ಸ್ ವಿಭಾಗದಲ್ಲಿ ದಿವ್ಯಾ ದೇಶಮುಖ್ (1.5) ಸೋತರೆ, ಆರ್‌.ವೈಶಾಲಿ (3.5) ತಮ್ಮ ಪಂದ್ಯ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.