ಡಿ. ಗುಕೇಶ್
(ಪಿಟಿಐ ಚಿತ್ರ)
ಹ್ಯಾಂಬರ್ಗ್ (ಜರ್ಮನಿ): ಫ್ರೀಸ್ಟೈಲ್ ಗ್ರ್ಯಾಂಡ್ ಸ್ಲಾಮ್ ಟೂರ್ ಚೆಸ್ ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಾಣದೇ, ವಿಶ್ವ ಚಾಂಪಿಯನ್ ಭಾರತದ ಡಿ. ಗುಕೇಶ್ ಅಭಿಯಾನ ಕೊನೆಗೊಳಿಸಿದ್ದಾರೆ.
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಗುಕೇಶ್, ಏಳನೇ ಸ್ಥಾನಕ್ಕಾಗಿ ನಡೆದ ಎರಡನೇ ಪ್ಲೇ-ಆಫ್ ಪಂದ್ಯದಲ್ಲಿ ಇರಾನ್ ಮೂಲದ ಫ್ರಾನ್ಸ್‌ನ ಗ್ರ್ಯಾಂಡ್ ಮಾಸ್ಟರ್ ಅಲಿರೆಜಾ ಫಿರೋಜಾ ವಿರುದ್ಧ ಸೋಲನುಭವಿಸಿದರು.
ಮೊದಲ ದಿನ ಡ್ರಾ ಸಾಧಿಸಿದ್ದ ಗುಕೇಶ್, ಬಿಳಿ ಕಾಯಿಗಳೊಂದಿಗೆ ಗೆಲುವು ಸಾಧಿಸುವ ಅವಕಾಶ ಹೊಂದಿದ್ದರು. ಆದರೆ 30 ನಡೆಗಳ ಅಂತಿಮದಲ್ಲಿ ಸೋಲೊಪ್ಪಿಕೊಂಡರು.
ಏತನ್ಮಧ್ಯೆ, ಫ್ರೀಸ್ಟೆಲ್ ಗ್ರ್ಯಾಂಡ್ ಸ್ಲಾಮ್ ಟೂರ್ ಸ್ಟೇಜ್ 1 ಫೈನಲ್ಸ್‌ನಲ್ಲಿ ಸ್ಥಳೀಯ ಫೇವರಿಟ್, ಜರ್ಮನಿಯ ವಿನ್ಸೆಂಟ್ ಕೀಮರ್ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.