ADVERTISEMENT

ಜಿಮ್ನಾಸ್ಟ್ ಪ್ರಣತಿ ನಾಯಕ್‌ಗೆ ಒಲಿಂಪಿಕ್ಸ್ ಟಿಕೆಟ್‌

ಪಿಟಿಐ
Published 1 ಮೇ 2021, 14:39 IST
Last Updated 1 ಮೇ 2021, 14:39 IST
ಪ್ರಣತಿ ನಾಯಕ್ -ಎಎಫ್‌ಪಿ ಚಿತ್ರ
ಪ್ರಣತಿ ನಾಯಕ್ -ಎಎಫ್‌ಪಿ ಚಿತ್ರ   

ನವದೆಹಲಿ: ಭಾರತದ ಜಿಮ್ನಾಸ್ಟ್ ಪ್ರಣತಿ ನಾಯಕ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದಾರೆ.

ಪಶ್ಚಿಮ ಬಂಗಾಳದ ಪ್ರಣತಿ 2019ರ ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ಈಗ ಏಷ್ಯಾದ ಕೋಟಾದಡಿ ಆಯ್ಕೆಯಾಗಿದ್ದಾರೆ. 26 ವರ್ಷದ ಈ ಜಿಮ್ನಾಸ್ಟ್‌ ಏಷ್ಯಾದಿಂದ ಶ್ರೀಲಂಕಾದ ಎಲ್ಪಿಟಿಯಾ ಬಡಾಲ್ಗೆ ನಂತರ ಕಾಯ್ದಿರಿಸಿದ ಕ್ರೀಡಾಪಟುವಿನ ಪಟ್ಟಿಯಲ್ಲಿದ್ದರು. ಚೀನಾದಲ್ಲಿ ಮೇ 29ರಿಂದ ನಡೆಯಬೇಕಾಗಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ ರದ್ದಾದ ಕಾರಣ ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

‘2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಲಿಂಪಿಕ್ಸ್‌ ಅರ್ಹತೆ ಗಳಿಸಲು ಆಗಲಿಲ್ಲ. ಆಗ ಬೇಸರವಾಗಿತ್ತು. ಕೋವಿಡ್‌ನಿಂದಾಗಿ ಎಲ್ಲ ಸ್ಪರ್ಧೆಗಳು ರದ್ದುಗೊಂಡಾಗ ಒಲಿಂಪಿಕ್ಸ್ ಆಸೆಯನ್ನು ಕೈಬಿಟ್ಟಿದ್ದೆ. ಈಗ ಕನಸು ನನಸಾಗಿದೆ, ಖುಷಿಯಾಗಿದೆ. ಏಷ್ಯಾ ಅಥವಾ ವಿಶ್ವ ಫೆಡರೇಷನ್‌ನಿಂದ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇನೆ’ ಎಂದು ಪ್ರಣತಿ ಹೇಳಿದ್ದಾರೆ.

ADVERTISEMENT

ಭಾರತ ಕ್ರೀಡಾ ಪ್ರಾಧಿಕಾರದಲ್ಲಿದ್ದ ಮಿನಾರ ಬೇಗಂ ಅವರು ಪ್ರಣತಿಗೆ ದೀರ್ಘ ಕಾಲದಿಂದ ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.