ADVERTISEMENT

ಕುಸ್ತಿ: ಹನ್ಸಿಕಾ, ಸಾರಿಕಾಗೆ ಬೆಳ್ಳಿ

ಪಿಟಿಐ
Published 25 ಅಕ್ಟೋಬರ್ 2025, 23:26 IST
Last Updated 25 ಅಕ್ಟೋಬರ್ 2025, 23:26 IST
   

ನೋವಿಸಾದ್, ಸರ್ಬಿಯಾ : ಭಾರತದ ಮಹಿಳಾ ಕುಸ್ತಿಪಟುಗಳಾದ ಹನ್ಸಿಕಾ ಲಂಬಾ ಮತ್ತು ಸಾರಿಕಾ ಮಲಿಕ್ ಅವರು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನ ತಮ್ಮ ತಮ್ಮ ವಿಭಾಗಗಳಲ್ಲಿ ಬೆಳ್ಳಿ ಪದಕ ಗೆದ್ದರು.

53 ಕೆಜಿ ವಿಭಾಗದ ಫೈನಲ್‌ನಲ್ಲಿ ಹನ್ಸಿಕಾ 0–4ರಿಂದ ಜಪಾನ್‌ನ ಹರುನಾ ಮೊರಿಕಾವಾ ಅವರಿಗೆ ಸೋತರು. 59 ಕೆಜಿ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಸಾರಿಕಾ ಅವರು ಜಪಾನ್‌ನ ರುಕಾ ನಟಾಮಿ ಅವರಿಗೆ ಶರಣಾದರು. 

ನಿಶು (55 ಕೆಜಿ), ನೇಹಾ ಶರ್ಮಾ (57 ಕೆಜಿ), ಪುಲ್ಕಿತ್ (65 ಕೆಜಿ), ಸೃಷ್ಟಿ (68 ಕೆಜಿ) ಮತ್ತು ಪ್ರಿಯಾ ಮಲಿಕ್ (76 ಕೆಜಿ) ಈ ಮೊದಲು ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ADVERTISEMENT

ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಪ್ರವಿಂದರ್ (74 ಕೆಜಿ) 2-8 ಅಂತರದಿಂದ ಜಪಾನ್‌ನ ಯೋಶಿನೋಸುಕೆ ಅಯೋಯಾಗಿ ವಿರುದ್ಧ ಕಂಚಿನ ಪ್ಲೇ-ಆಫ್‌ ಸ್ಪರ್ಧೆಯಲ್ಲಿ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.