ADVERTISEMENT

ಶ್ರವಣದೋಷವುಳ್ಳವರ ಕ್ರೀಡಾಕೂಟ: ಬೆಂಗಳೂರಿಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 18:07 IST
Last Updated 22 ನವೆಂಬರ್ 2025, 18:07 IST
   

ಶಿರಸಿ: ಬೆಂಗಳೂರು ತಂಡವು ಇಲ್ಲಿ ನಡೆದ ಶ್ರವಣದೋಷವುಳ್ಳವರ 15ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು. ತಂಡವು ಒಟ್ಟು 173 ಅಂಕ ಗಳಿಸಿ, ಕಿರೀಟ ಧರಿಸಿತು.

ಉತ್ತರ ಕನ್ನಡ ಜಿಲ್ಲಾ ತಂಡ 96 ಅಂಕಗಳೊಂದಿಗೆ ದ್ವಿತೀಯ ಮತ್ತು ದಾವಣಗೆರೆ ತಂಡ 78 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿವೆ.

18 ವರ್ಷದೊಳಗಿನ ಬಾಲಕರ ವಾಲಿಬಾಲ್‍ನಲ್ಲಿ ದಕ್ಷಿಣ ಕನ್ನಡ ಪ್ರಥಮ, ಮೈಸೂರು ದ್ವಿತೀಯ ಹಾಗೂ ಕೊಡಗು ತೃತೀಯ ಸ್ಥಾನ ಗಳಿಸಿದೆ. ಜೂನಿಯರ್‌ ವಿಭಾಗದ ವಾಲಿಬಾಲ್‍ನಲ್ಲಿ ಮೈಸೂರು ಪ್ರಥಮ, ಬೆಂಗಳೂರು ದ್ವಿತೀಯ, ಮಂಡ್ಯ ತೃತೀಯ ಸ್ಥಾನ ಪಡೆದಿದೆ.

ADVERTISEMENT

ಜೂನಿಯರ್‌ ಮಹಿಳೆಯರ ವಾಲಿಬಾಲ್‍ನಲ್ಲಿ ಬೆಂಗಳೂರು ಚಿನ್ನ, ತುಮಕೂರು ಬೆಳ್ಳಿ, ಮಂಡ್ಯ ಕಂಚು ಜಯಿಸಿತು. ಪುರುಷರ ವಿಭಾಗದ ಉತ್ತಮ ಕ್ರೀಡಾಪಟುವಾಗಿ ಉತ್ತರ ಕನ್ನಡದ ಸೂರ್ಯ ಮರಾಠಿ ಹೊರಹೊಮ್ಮಿದ್ದು, 200 ಮೀ., 400 ಮೀ.ಓಟ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಮಹಿಳಾ ವಿಭಾಗದ ಪ್ರಶಸ್ತಿಯನ್ನು ದಕ್ಷಿಣ ಕನ್ನಡದ ಹರ್ಷಿತಾ ರವೀಂದ್ರ ಗೆದ್ದಿದ್ದು, ಅವರು ಹೈಜಂಪ್‌ ಮತ್ತು 100 ಮೀಟರ್ ಓಟದಲ್ಲಿ ಚಿನ್ನ ಹಾಗೂ ಶಾಟ್‌ಪಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.