ADVERTISEMENT

ರಾಷ್ಟ್ರೀಯ ಶೂಟಿಂಗ್: ವಿಶ್ವ ದಾಖಲೆ ಸರಿಗಟ್ಟಿದ ಹೀನಾ

ಪಿಟಿಐ
Published 26 ಡಿಸೆಂಬರ್ 2018, 18:00 IST
Last Updated 26 ಡಿಸೆಂಬರ್ 2018, 18:00 IST
ಹೀನಾ ಸಿಧು
ಹೀನಾ ಸಿಧು   

ನವದೆಹಲಿ: ವಿಶ್ವ ದಾಖಲೆ ಸರಿಗಟ್ಟಿದ ಹೀನಾ ಸಿಧು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್‌ ಆಯ್ಕೆ ಟ್ರಯಲ್ಸ್‌ನಲ್ಲಿ ಗಮನ ಸೆಳೆದರು. ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲು ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮನು ಭಾಕರ್‌ ಇದೇ ವಿಭಾಗದಲ್ಲಿ ಎರಡನೆಯವರಾದರು.

ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಹೀನಾ ಮೊದಲ ಸುತ್ತಿನಲ್ಲಿ 587 ಸ್ಕೋರ್ ಗಲಿಸಿದರು. ಈ ಮೂಲಕ ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌, ಗ್ರೀಸ್‌ನ ಅನಾ ಕೊರಕಕಿ ಅವರ ದಾಖಲೆ ಸರಿಗಟ್ಟಿದರು. ಭಾಕರ್‌ 579 ಸ್ಕೋರ್ ಗಳಿಸಿದರು.

ರಾಜಸ್ತಾನದ ದಿವ್ಯಾಂಶು ಸಿಂಗ್ ಪನ್ವರ್‌ 10 ಮೀಟರ್ಸ್‌ ಏರ್ ರೈಫಲ್‌ನ ಸೀನಿಯರ್‌, ಯೂತ್‌ ಮತ್ತು ಜೂನಿಯರ್ ವಿಭಾಗಗಳಲ್ಲಿ ಮೊದಲಿಗರಾದರು. 50 ಮೀಟರ್ಸ್ ರೈಫಲ್‌–3 ಪೊಸಿಷನ್‌ನಲ್ಲಿ ಗುಜರಾತ್‌ನ ಕೆ.ಸಿ.ಹೇಮಾ, ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತೆ ಅಂಜುಮ್ ಮೌದ್ಗಿಲ್‌ ಅವರಿಗೆ ನಿರಾಸೆ ಮೂಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.