ADVERTISEMENT

ಪಂಚದೇಶಗಳ ಮಹಿಳಾ ಹಾಕಿ ಟೂರ್ನಿ: ಪೂನಿಯಾ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:35 IST
Last Updated 8 ಡಿಸೆಂಬರ್ 2023, 16:35 IST
ಸವಿತಾ ಪೂನಿಯಾ
ಸವಿತಾ ಪೂನಿಯಾ   

ನವದೆಹಲಿ (ಪಿಟಿಐ): ಸ್ಪೇನ್‌ನಲ್ಲಿ ಡಿ.15 ರಿಂದ 22 ರವರೆಗೆ ನಡೆಯಲಿರುವ ಪಂಚದೇಶಗಳ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ಅನುಭವಿ ಗೋಲ್‌ಕೀಪರ್‌ ಸವಿತಾ ಪೂನಿಯಾ ಮುನ್ನಡೆಸಲಿದ್ದಾರೆ.

ಟೂರ್ನಿಗೆ 22 ಆಟಗಾರ್ತಿಯರ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ಅನುಭವಿ ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ಉಪ ನಾಯಕಿಯಾಗಿದ್ದಾರೆ. ವೆಲೆನ್ಸಿಯಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತವು ಐರ್ಲೆಂಡ್, ಜರ್ಮನಿ, ಸ್ಪೇನ್ ಮತ್ತು ಬೆಲ್ಜಿಯಂ ವಿರುದ್ಧ ಸೆಣಸಲಿದೆ.

ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್‌ ಒಲಂಪಿಕ್‌ ಕೂಟದ ಕ್ವಾಲಿಫೈಯರ್‌ ಟೂರ್ನಿಯು ಜ.13ರಿಂದ ರಾಂಚಿಯಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಪಂಚದೇಶಗಳ ಟೂರ್ನಿ ಭಾರತ ತಂಡಕ್ಕೆ ಪೂರ್ವಸಿದ್ಧತೆಗೆ ವೇದಿಕೆಯಾಗಿದೆ.

ADVERTISEMENT

ತಂಡ ಹೀಗಿದೆ: ಗೋಲ್‌ಕೀಪರ್‌: ಸವಿತಾ ಪೂನಿಯಾ (ನಾಯಕಿ), ಬಿಚು ದೇವಿ ಖರಿಬಮ್

ಡಿಫೆಂಡರ್ಸ್‌: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಗುರ್ಜಿತ್ ಕೌರ್, ಅಕ್ಷತಾ ಅಬಾಸೊ ಧೇಕಲೆ

ಮಿಡ್‌ಫೀಲ್ಡರ್ಸ್‌: ನಿಶಾ, ವೈಷ್ಣವಿ ಫಾಲ್ಕೆ, ಮೋನಿಕಾ, ಸಲೀಮಾ ಟೆಟೆ, ನೇಹಾ, ನವನೀತ್ ಕೌರ್, ಸೋನಿಕಾ, ಜ್ಯೋತಿ, ಬಲಜೀತ್‌ ಕೌರ್

ಫಾರ್ವರ್ಡ್ಸ್‌: ಜ್ಯೋತಿ ಛಾತ್ರಿ, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯಾ (ಉಪನಾಯಕಿ), ಬ್ಯೂಟಿ ಡಂಗ್‌ಡಂಗ್, ಶರ್ಮಿಳಾ ದೇವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.