ADVERTISEMENT

ಹೀರೋ ಹಾಕಿ ಇಂಡಿಯಾ ಲೀಗ್: SG ಪೈಪರ್ಸ್ ಪುರುಷರ ತಂಡ ಚೆನ್ನೈಗೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 16:26 IST
Last Updated 22 ಡಿಸೆಂಬರ್ 2025, 16:26 IST
   

ಬೆಂಗಳೂರು: ಹೀರೋ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್‌) ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, SG ಪೈಪರ್ಸ್ ಪುರುಷರ ತಂಡ ಚೆನ್ನೈಗೆ ಆಗಮಿಸಿದೆ.

2026ರ ಜನವರಿ 3ರಂದು ಟೂರ್ನಿ ಆರಂಭವಾಗಲಿದೆ.

ಭಾರತ ತಂಡದ ಪರ ಆಡುವ ಅಂತರರಾಷ್ಟ್ರೀಯ ಆಟಗಾರರು ಹಾಗೂ ಯುವ ಪ್ರತಿಭೆಗಳು SG ಪೈಪರ್ಸ್ ಪಡೆಯಲ್ಲಿದ್ದಾರೆ.

ADVERTISEMENT

'ರಕ್ಷಣಾ ವಿಭಾಗದ ಮೇಲೆ ಹೆಚ್ಚಿನ ನಿಗಾ ವಹಿಸಿದ್ದೇವೆ. ಆಟಗಾರರಿಗೆ ಪ್ರತಿದಿನ ಉತ್ತೇಜನ ಮತ್ತು ಆತ್ಮವಿಶ್ವಾಸ ತುಂಬುವುದು ನನ್ನ ಹೊಣೆ' ಎಂದು ತಂಡದ ಮುಖ್ಯ ಕೋಚ್ ಟಿಮ್ ಔಡನಾಲರ್ ಹೇಳಿದ್ದಾರೆ.

ಡಿಫೆಂಡರ್ ಜರ್ಮನ್‌ಪ್ರೀತ್ ಸಿಂಗ್ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಂದಿರುವ ಅನುಭವದೊಂದಿಗೆ ತಂಡ ಮುನ್ನಡೆಸಲಿದ್ದಾರೆ. ಒತ್ತಡದ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವುದು ಹಾಗೂ ಬ್ಯಾಕ್‌ಲೈನ್ ಅನ್ನು ಸಮರ್ಪಕವಾಗಿ ಸಂಘಟಿಸುವುದು ತಂಡದ ತಂತ್ರವಾಗಿದೆ ಎಂದು ತಿಳಿಸಿದ್ದಾರೆ.

ತಂಡದಲ್ಲಿ ರೋಹಿತ್, ಅಂಕಿತ್ ಪಾಲ್, ದಿಲ್ರಾಜ್ ಸಿಂಗ್ ಮತ್ತು ಸೌರಭ್ ಆನಂದ್ ಕುಶ್ವಾಹಾ ಕೂಡ ಇದ್ದಾರೆ. ಇವರು ಇತ್ತೀಚೆಗೆ ನಡೆದ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ತಂಡದಲ್ಲಿ ಆಡಿದ್ದಾರೆ.

ನಾಯಕ ಜರ್ಮನ್‌ಪ್ರೀತ್ ಸಿಂಗ್, 'ನಮ್ಮ ತಂಡ ಸಮತೋಲನದಿಂದ ಕೂಡಿದೆ. ಹಿರಿಯರು ಹಾಗೂ ಯುವ ಆಟಗಾರರ ಉತ್ತಮ ಸಂಯೋಜನೆ ಇದೆ. ಜೂನಿಯರ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಯುವ ಆಟಗಾರರು ಆತ್ಮವಿಶ್ವಾಸದೊಂದಿಗೆ ಬಂದಿದ್ದಾರೆ. ಕಳೆದ ಸೀಸನ್ ನಮ್ಮ ನಿರೀಕ್ಷೆಯಂತೆ ಸಾಗಲಿಲ್ಲ, ಆದ್ದರಿಂದ ಈ ಬಾರಿ ನಮ್ಮ ಗುರಿ ಸ್ಪಷ್ಟವಾಗಿದೆ' ಎಂದಿದ್ದಾರೆ.

ಫಾರ್ವರ್ಡ್ಸ್: ಟೋಮಾಸ್ ಡೊಮೆನೆ, ಆದಿತ್ಯ ಲಾಲಗೆ, ಸೌರಭ್ ಆನಂದ್, ದಿಲ್ರಾಜ್ ಸಿಂಗ್, ರೋಮನ್ ಡುವೇಕೊಟ್

ಮಿಡ್‌ಫೀಲ್ಡರ್ಸ್: ಶಮ್ಶೇರ್ ಸಿಂಗ್, ರಾಜ್‌ಕುಮಾರ್ ಪಾಲ್, ಅಂಕಿತ್ ಪಾಲ್, ಕಿಂಗ್ಸನ್ ಸಿಂಗ್, ಕೈ ವಿಲ್ಲಾಟ್, ಜೇಕಬ್ ಡ್ರೇಪರ್

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್ (ನಾಯಕ), ವರುಣ್ ಕುಮಾರ್, ರೋಹಿತ್, ಮಂಜೀತ್, ಗ್ಯಾರೆತ್ ಫರ್ಲಾಂಗ್, ರೂಪಿಂದರ್ ಪಾಲ್ ಸಿಂಗ್, ಬ್ರಾಮ್ ವಾನ್ ಬ್ಯಾಟಮ್

ಗೋಲ್‌ಕೀಪರ್ಸ್: ಟೋಮಾಸ್ ಸ್ಯಾಂಟಿಯಾಗೋ, ಪವನ್

ವೇಳಾಪಟ್ಟಿ

  • ಜನವರಿ 5: SG ಪೈಪರ್ಸ್ vs HIL GC – (ಸಮಯ: 8:15 ರಾತ್ರಿ | ಸ್ಥಳ: ಚೆನ್ನೈ)

  • ಜನವರಿ 9: ತಮಿಳುನಾಡು ಡ್ರಾಗನ್ಸ್ vs SG ಪೈಪರ್ಸ್ (ಸಮಯ: ರಾತ್ರಿ 8:15 | ಸ್ಥಳ: ಚೆನ್ನೈ)

  • ಜನವರಿ 12: SG ಪೈಪರ್ಸ್ vs ಹೈದರಾಬಾದ್ ತೂಫಾನ್ಸ್ (ಸಮಯ: ಸಂಜೆ 6:15 | ಸ್ಥಳ: ರಾಂಚಿ)

  • ಜನವರಿ 14: ರಾಂಚಿ ರಾಯಲ್ಸ್ vs SG ಪೈಪರ್ಸ್ (ಸಮಯ: 8:15 | ಸ್ಥಳ: ರಾಂಚಿ)

  • ಜನವರಿ 17: ಕಲಿಂಗ ಲ್ಯಾನ್ಸರ್ಸ್ vs SG ಪೈಪರ್ಸ್ (ಸಮಯ: ರಾತ್ರಿ 8:15 | ಸ್ಥಳ: ಭುವನೇಶ್ವರ)

  • ಜನವರಿ 18: SG ಪೈಪರ್ಸ್ vs ಶ್ರಾಚಿ ರಾರ್ಹ್ ಬೆಂಗಾಲ್ ಟೈಗರ್ಸ್ (ಸಮಯ: ಸಂಜೆ 6:15 | ಸ್ಥಳ: ಭುವನೇಶ್ವರ)

  • ಜನವರಿ 22: JSW ಸೂರ್ಮಾ ಹಾಕಿ ಕ್ಲಬ್ vs SG ಪೈಪರ್ಸ್ (ಸಮಯ: ರಾತ್ರಿ 8:15 | ಸ್ಥಳ: ಭುವನೇಶ್ವರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.