ADVERTISEMENT

ಹಿಮಾ ದಾಸ್‌ಗೆ ಆರನೇ ಚಿನ್ನ

ಪಿಟಿಐ
Published 18 ಆಗಸ್ಟ್ 2019, 20:15 IST
Last Updated 18 ಆಗಸ್ಟ್ 2019, 20:15 IST
ಹಿಮಾ ದಾಸ್‌
ಹಿಮಾ ದಾಸ್‌   

ನವದೆಹಲಿ: ಭಾರತದ ಹಿಮಾ ದಾಸ್‌ ಮತ್ತೊಂದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕಿ ಮಿಟಿಂಕ್‌ ರೇಟರ್‌ ಸ್ಪರ್ಧೆಯ 300 ಮೀಟರ್ಸ್‌ ಓಟದಲ್ಲಿ ಅವರಿಗೆ ಪದಕ ಒಲಿದಿದೆ. ಪುರುಷರ ಸ್ಪರ್ಧೆಯಲ್ಲಿ ಮಹ ಮ್ಮದ್‌ ಅನಾಸ್‌ ಕೂಡ ಚಿನ್ನಕ್ಕೆ ಮುತ್ತಿಟ್ಟರು.

ಜುಲೈ 2ರಿಂದ ಇಲ್ಲಿಯವರೆಗೆ ಯುರೋಪಿಯನ್‌ ಸ್ಪರ್ಧೆಗಳಲ್ಲಿ ಹಿಮಾ ಗೆದ್ದ ಆರನೇ ಚಿನ್ನ ಇದು.

ಜುಲೈ 20ರಂದು ಜೆಕ್‌ ಗಣರಾಜ್ಯದಲ್ಲೇ ನಡೆದಿದ್ದ ನೊವ್‌ ಮೆಸ್ಟ್ರೊ ಕೂಟದಲ್ಲಿ ಅವರು ಐದನೇ ಚಿನ್ನಕ್ಕೆ ಕೊರಳೊಡ್ಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.