ADVERTISEMENT

ಹಿಂದ್ ಕೇಸರಿ ಶ್ರೀಪತಿ ನಿಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 14:22 IST
Last Updated 14 ಡಿಸೆಂಬರ್ 2020, 14:22 IST
ಶ್ರೀಪತಿ ಕಂಚನಾಳ
ಶ್ರೀಪತಿ ಕಂಚನಾಳ   

ಪುಣೆ (ಪಿಟಿಐ): ಬೆಳಗಾವಿ ಮೂಲದ ಪೈಲ್ವಾನ್ ಶ್ರೀಪತಿ ಕಂಚನಾಳ್ (86) ಕೋಲ್ಹಾಪುರದ ಆಸ್ಪತ್ರೆಯೊಂದರಲ್ಲಿ ಸೋಮವಾರ ನಿಧನರಾದರು.

ಪ್ರತಿಷ್ಠಿತ ಹಿಂದ್ ಕೇಸರಿ ಪ್ರಶಸ್ತಿ ವಿಜೇತರಾಗಿದ್ದರು. ಅವರು ಕುಸ್ತಿ ಕಲಿಕೆ ಮತ್ತು ವೃತ್ತಿಗಾಗಿ ಕೋಲ್ಹಾಪುರದ ನೆಲೆಸಿದ್ದರು.

’ನನ್ನ ತಂದೆಗೆ ಕೆಲವು ಕಾಲದಿಂದ ಅನಾರೋಗ್ಯವಿತ್ತು. ಕೋಲ್ಹಾಪುರದ ಡೈಮಂಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‘ ಎಂದು ರೋಹಿತ್ ಕಂಚನಾಳ ತಿಳಿಸಿದ್ದಾರೆ.

ADVERTISEMENT

1959ರಲ್ಲಿ ಶ್ರೀಪತಿ ಅವರು ರುಸ್ತುಂ ಎ ಪಂಜಾಬ್ ಬಟ್ಟಾಸಿಂಗ್ ಅವರನ್ನು ದೆಹಲಿಯ ನ್ಯೂ ರೈಲ್ವೆ ಕ್ರೀಡಾಂಗಣದಲ್ಲಿ ನಡೆದಿದ್ದ ಕುಸ್ತಿ ಸ್ಪರ್ಧೆಯಲ್ಲಿ ಸೋಲಿಸಿದ್ದರು. ದೇಶದ ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಂದ್‌ ಕೇಸರಿಯನ್ನು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.