ADVERTISEMENT

ರಾಜ್ಯ ಮಟ್ಟದ ಹಾಕಿ ಟೂರ್ನಿ: ಅಲಿಶಾನ್‌ ಹ್ಯಾಟ್ರಿಕ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 18:55 IST
Last Updated 4 ಮಾರ್ಚ್ 2020, 18:55 IST
ರೋಹನ್‌ ತಿಮ್ಮಯ್ಯ (ನೀಲಿ ಪೋಷಾಕು) ಗೋಲುಪೆಟ್ಟಿಗೆಯತ್ತ ಚೆಂಡನ್ನು ಹೊಡೆದ ಪರಿ –ಪ್ರಜಾವಾಣಿ ಚಿತ್ರ
ರೋಹನ್‌ ತಿಮ್ಮಯ್ಯ (ನೀಲಿ ಪೋಷಾಕು) ಗೋಲುಪೆಟ್ಟಿಗೆಯತ್ತ ಚೆಂಡನ್ನು ಹೊಡೆದ ಪರಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹ್ಯಾಟ್ರಿಕ್‌ ಗೋಲು ಬಾರಿಸಿದ ಎಂ.ಡಿ. ಅಲಿಶಾನ್‌, ಕೆ.ಎಂ.ಕಾರ್ಯಪ್ಪ ಸ್ಮಾರಕರಾಜ್ಯಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಸತರ್ನ್‌ ಕಮಾಂಡ್‌ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಶಾಂತಿನಗರದ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸತರ್ನ್‌ ಕಮಾಂಡ್‌ 6–0ಯಿಂದ ರಾಜ್ಯ ಪೊಲೀಸ್‌ (ಕೆ.ಎಸ್‌.ಪಿ) ತಂಡವನ್ನು ಮಣಿಸಿತು.

ಅಲಿಶಾನ್ 9, 14 ಹಾಗೂ 59ನೇ ನಿಮಿಷಗಳಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ವಿಜೇತ ತಂಡದ ಅಜಿತ್‌ ಶಿಂಧೆ(1ನೇ ನಿಮಿಷ), ಸುಮಿತ್‌ ಪಾಲ್‌ ಸಿಂಗ್‌ (10ನೇ ನಿಮಿಷ) ಹಾಗೂ ಮಣಿ ಸಿಂಗ್‌ (15ನೇ ನಿಮಿಷ) ತಲಾ ಮೂರು ಗೋಲು ಹೊಡೆದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ರೈಲು ಗಾಲಿ ಕಾರ್ಖಾನೆ ತಂಡ 5–2 ಗೋಲುಗಳಿಂದ ಹಾಕಿ ಕೊಡಗು ಜೂನಿಯರ್ ತಂಡವನ್ನು ಮಣಿಸಿತು.ಗಾಲಿ ಕಾರ್ಖಾನೆ ಪರ ಸಂಪತ್‌ ಎಸ್‌.ಎನ್‌ (40, 42ನೇ ನಿಮಿಷ), ಸುಶೀಲ್‌ ಕ್ಸಾಲ್‌ಕ್ಸೊ (24ನೇ ನಿಮಿಷ), ಕುಶ ಜೆ.ಪಿ. (31ನೇ ನಿಮಿಷ) ಹಾಗೂ ದೀಕ್ಷಿತ್‌ ಎಸ್‌.ಪಿ. (52ನೇ ನಿಮಿಷ) ಕೈಚಳಕ ತೋರಿದರು.

ಕೊಡಗು ತಂಡದ ಪೂವಣ್ಣ ಸಿ.ಕೆ. (19ನೇ ನಿಮಿಷ) ಹಾಗೂ ಚಿರಣ್‌ ಮೇದಪ್ಪ (48ನೇ ನಿಮಿಷ) ಗೋಲು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಎಂ.ಇ.ಜಿ. ತಂಡವು 2–2ರಿಂದ ಡಿವೈಇಎಸ್‌ನೊಂದಿಗೆ ಡ್ರಾ ಸಾಧಿಸಿತು.

ಡಿವೈಇಎಸ್‌ ತಂಡದ ಮಣಿಕಂಠ ಎ.ಬಿ. (34ನೇ ನಿಮಿಷ) ಹಾಗೂ ಜಯವಂತ್‌ (37ನೇ ನಿಮಿಷ) ಗೋಲು ಹೊಡೆದರೆ, ಎಂಇಜಿ ಪರ ಆಶಿಶ್‌ ಡಂಗ್‌ ಡಂಗ್‌ (44ನೇ ನಿಮಿಷ) ಮತ್ತು ದೀಪಕ್‌ (59ನೇ ನಿಮಿಷ) ಯಶಸ್ಸು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.