ADVERTISEMENT

ಕೋಚ್‌ಗಳ ನೋಂದಣಿಗೆ ಹಾಕಿ ಇಂಡಿಯಾದಿಂದ ಮುಕ್ತ ಅರ್ಜಿ ಸಲ್ಲಿಕೆ ವಿಧಾನ

ಪಿಟಿಐ
Published 1 ಜುಲೈ 2020, 9:59 IST
Last Updated 1 ಜುಲೈ 2020, 9:59 IST
...
...   

ನವದೆಹಲಿ: ಹಾಕಿ ಇಂಡಿಯಾ (ಎಚ್‌ಐ) ತನ್ನ ತರಬೇತುದಾರರು ಹಾಗೂ ತಾಂತ್ರಿಕ ಅಧಿಕಾರಿಗಳ ನೋಂದಣಿಗಾಗಿ ಬುಧವಾರ ಮುಕ್ತ ಅರ್ಜಿ ಸಲ್ಲಿಕೆ ವಿಧಾನವನ್ನು ಆರಂಭಿಸಿದೆ.

ಈ ವಿಧಾನದ ಪ್ರಕಾರ, ಸಂಭವನೀಯ ಕೋಚ್‌ಗಳು ಮತ್ತು ತಾಂತ್ರಿಕ ಅಧಿಕಾರಿಗಳು ಎಚ್‌ಐನ ನೋಂದಾಯಿತ ಸದಸ್ಯ ಘಟಕದ (ಆರ್‌ಎಂಯು) ಅನುಮೋದನೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿರುವ ಮುಕ್ತ ಲಿಂಕ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಯು ಅರ್ಜಿ ಸಲ್ಲಿಸಿದ ಬಳಿಕ ಅದಕ್ಕೆ ಸಂಬಂಧಿತ ಆರ್‌ಎಮ್‌ಯುನ ಅನುಮೋದನೆ ಅಗತ್ಯವಾಗಿರುತ್ತದೆ.

ADVERTISEMENT

‘ಆರ್‌ಎಮ್‌ಯುನ ಅಂಗೀಕಾರ ಪಡೆದ ಬಳಿಕ, ಕೋಚ್‌ ಅಥವಾ ತಾಂತ್ರಿಕ ಅಧಿಕಾರಿಯಾಗಿ ನೋಂದಾವಣೆಗೆ ರಾಷ್ಟ್ರೀಯ ಫೆಡರೇಷನ್‌ನ ಅನುಮೋದನೆಯೂ ಬೇಕಾಗುತ್ತದೆ’ ಎಂದು ಎಚ್‌ಐ ಹೇಳಿದೆ.

‘ಕೋಚ್‌ಗಳು ಹಾಗೂ ತಾಂತ್ರಿಕ ಅಧಿಕಾರಿಗಳ ನೋಂದಣಿಗಾಗಿ ಮುಕ್ತ ಅರ್ಜಿ ಸಲ್ಲಿಕೆ ವಿಧಾನ ಆರಂಭಿಸಿದ್ದು ಉತ್ತಮ ನಡೆ. ಅಗತ್ಯವಿರುವ ಪ್ರತಿಯೊಬ್ಬರಿಗೂ ಇದರಿಂದ ತುಂಬಾ ಅನುಕೂಲವಾಗಲಿದೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹಮದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.