ADVERTISEMENT

ಹಾಕಿ: ಜಾರ್ಖಂಡ್‌ಗೆ ಮಣಿದ ಕರ್ನಾಟಕ

ಪಿಟಿಐ
Published 5 ಆಗಸ್ಟ್ 2025, 19:29 IST
Last Updated 5 ಆಗಸ್ಟ್ 2025, 19:29 IST
   

ಕಾಕಿನಾಡ: ಜಾರ್ಖಂಡ್‌ ತಂಡ, ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ‘ಎ’ ಡಿವಿಷನ್‌ ಪಂದ್ಯದಲ್ಲಿ ಮಂಗಳವಾರ ಕರ್ನಾಟಕ ತಂಡವನ್ನು 2–0 ಗೋಲುಗಳಿಂದ ಸೋಲಿಸಿತು.

ರೋಶನಿ ಐಂದ್‌ 44ನೇ ನಿಮಿಷ ಜಾರ್ಖಂಡ್ ತಂಡಕ್ಕೆ ಮುನ್ನಡೆ ಒದಗಿಸಿದರು. ಪಂದ್ಯ ಮುಗಿಯಲು ಎರಡು ನಿಮಿಷಗಳಿರುವಾಗ  ಸರೋಜ್‌ ಕುಮಾರಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

ಇತರ ಪಂದ್ಯಗಳಲ್ಲಿ ಮಧ್ಯಪ್ರದೇಶ, ಹರಿಯಾಣ, ಕೂಡ ಮುನ್ನಡೆ ಸಾಧಿಸಿದವರು. ಹರಿಯಾಣ 7–1 ಗೋಲುಗಳಿಂದ ಬಂಗಾಳ ತಂಡವನ್ನು, ಮಧ್ಯಪ್ರದೇಶ 5–0 ಗೋಲುಗಳಿಂದ ಚಂಡೀಗಢ ತಂಡವನ್ನು ಮಣಿಸಿದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.