ಬೆಂಗಳೂರು: ಬೆಂಗಳೂರು ಬ್ಯ್ಲೂಸ್ ಹಾಕಿ ಕ್ಲಬ್ ‘ಎ’ ತಂಡವು ಕೆಎಸ್‌ಎಚ್‌ಎ ಡಿ.ಎಸ್. ಮೂರ್ತಿ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಕೋಲಾರ ಜಿಲ್ಲೆ ತಂಡದ ಎದುರು ಜಯಿಸಿತು.
ಶಾಂತಿನಗರದಲ್ಲಿರುವ ಕೆಎಸ್‌ಎಚ್‌ಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲ್ಯೂಸ್ ತಂಡವು 3–1ರಿಂದ ಕೋಲಾರ ತಂಡವನ್ನು ಸೋಲಿಸಿತು. ಬೆಂಗಳೂರು ತಂಡದ ಮನೋಜ್ ಕುಮಾರ್ ಎಸ್ (31ನೇ ನಿ), ಆರ್. ಗೋವಿಂದರಾಜ್ (47ನೇ ನಿ) ಮತ್ತು ಎ. ಅಜಿತ್ (58ನೇ ನಿ) ಗೋಲು ಗಳಿಸಿದರು. ಕೋಲಾರ ತಂಡದ ಕರಣಶಿವ (54ನೇ ನಿ) ಗೋಲು ಹೊಡೆದರು.
ಎರಡನೇ ಪಂದ್ಯದಲ್ಲಿ ವೈಲ್ಡ್‌ಬೋರ್ ತಂಡವು 2–1ರ9ಂದ ಕೂರ್ಗ್ ಡೈರ್‌ವೋಲ್ವ್ಸ್ ವಿರುದ್ಧ ಜಯಿಸಿತು. ವಿಜೇತ ತಂಡದ ವಿಶಾಲ್ (11ನೇ ನಿ) ಹಾಗೂ ಗಗನ್ (19ನೇ ನಿ) ಗೋಲು ಹೊಡೆದರು. ಕೂರ್ಗ್ ತಂಡದ ರಜತ್ ಗಣಪತಿ (23ನೇ ನಿ) ಗೋಲು ದಾಖಲಿಸಿದರು.
ಇಂದಿನ ಪಂದ್ಯಗಳು
ರೇನ್‌ಬೋ ಹಾಕಿ ಕ್ಲಬ್ –ಕೂರ್ಗ್ ಡೈರ್‌ವೋಲ್ವ್ಸ್ (ಮಧ್ಯಾಹ್ನ 1.30)
ಟೀಮ್ ವೈಲ್ಡ್‌ಬೋರ್ – ಕೋಲಾರ ಜಿಲ್ಲಾ ಹಾಕಿ ಕ್ಲಬ್ (ಮಧ್ಯಾಹ್ನ 3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.