ADVERTISEMENT

ಹಾಕಿ: ಎನ್‌ಐಇ ಕಾಲೇಜು ಚಾಂಪಿಯನ್‌

ಕೊಡಗಿನ ಪೊನ್ನಂಪೇಟೆ ಸಿಐಟಿ ಕಾಲೇಜು ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 5:33 IST
Last Updated 10 ನವೆಂಬರ್ 2022, 5:33 IST
ಟೂರ್ನಿಯಲ್ಲಿ ಜಯ ಗಳಿಸಿದ ಎನ್‌ಐಇ ಕಾಲೇಜು ತಂಡದ ಸಿ.ಡಿ.ಅಚ್ಚಯ್ಯ, ಯತಿಕ್ ಅಯ್ಯಪ್ಪ, ಅಚಲ್‌ ಚೆಂಗಪ್ಪ, ತಿಮ್ಮಯ್ಯ, ಕುಶಾಲಪ್ಪ, ಶಿವರಾಜ್, ಮೊಹಮ್ಮದ್ ಅಯಾನ್, ಹಿತೇಶ್, ರಜತ್ ಸೂರ್ಯ, ಚಂದ್ರಶೇಖರ್‌, ಸುಜನ್, ಗುರು ಪ್ರಸಾದ್, ಗೋಕುಲ್ ತಿಮ್ಮಯ್ಯ, ಮುತ್ತಪ್ಪ, ರಿಷಭ್, ಶೆಯಾನ್ ಸೋಮಯ್ಯ ಟ್ರೋಫಿ ಹಿಡಿದು ಸಂಭ್ರಮಿಸಿದರು. ಕಾಂತರಾಜು, ವೈ.ಅಶೋಕ್‌, ಎಚ್‌.ಸಿ.ಸುದಿನ ಇದ್ದಾರೆ

ಮೈಸೂರು: ಎನ್‌ಐಇ ಕಾಲೇಜು ತಂಡವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಲಯ ಮಟ್ಟದ ಪುರುಷರ ಹಾಕಿ ಟೂರ್ನಿಯಲ್ಲಿ ಕೊಡಗಿನ ಪೊನ್ನಂಪೇಟೆಯ ‘ಕೂರ್ಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-1ರಿಂದ ಮಣಿಸಿ‍ಪ್ರಶಸ್ತಿ ಜಯಿಸಿತು.

‌ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಬುಧವಾರ ನಡೆದ ರೋಚಕ ಹಣಾಹಣಿಯಲ್ಲಿ1–1 ಗೋಲು ಗಳಿಸಿದ ಉಭಯ ತಂಡಗಳು ಸಮ ಬಲ ಸಾಧಿಸಿದ್ದವು. ಎನ್‌ಐಇ ಕಾಲೇಜಿನ ಸಿ.ಡಿ.ಅಚ್ಚಯ್ಯ ಹಾಗೂ‘ಕೂರ್ಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ ತಂಡದ ತೀರ್ಥಕುಮಾರ್‌ ಗೋಲು ದಾಖಲಿಸಿದ್ದರು.

ನಂತರ ನಡೆದ ಶೂಟೌಟ್‌ನಲ್ಲಿಕೊಡಗು ತಂಡದ ತೀರ್ಥ ಕುಮಾರ್‌ ಒಂದು ಗೋಲು ಗಳಿಸಿದರೆ, ಎನ್‌ಐಇ ಕಾಲೇಜಿನ ಗುರುಪ್ರಸಾದ್‌, ಅಚಲ್‌ ಚೆಂಗಪ್ಪ ಹಾಗೂ ನಿಶಾನ್‌ ಚೆಂಡನ್ನು ನೆಟ್‌ಗೆ ಗುರಿ ಮುಟ್ಟಿಸುವ ಮೂಲಕ ಗೆಲುವು ತಂದು ಕೊಟ್ಟರು.

ADVERTISEMENT

ಅದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಎನ್‌ಐಇ ಕಾಲೇಜು 1-0 ಗೋಲುಗಳಿಂದ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜು ವಿರುದ್ಧ ಹಾಗೂ ಪೊನ್ನಂಪೇಟೆಯ ಸಿಐಟಿ ಕಾಲೇಜು 3-2 ಗೋಲಿನ ಅಂತರದಲ್ಲಿ ಪಿಇಎಸ್ ಮಂಡ್ಯ ವಿರುದ್ಧ ಗೆಲುವು ಸಾಧಿಸಿದ್ದವು.

ವಿಜಯನಗರದ ಎನ್‌ಐಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಇಇಟಿ) ಆಯೋಜಿಸಿದ್ದಟೂರ್ನಿಗೆ ರಾಷ್ಟ್ರೀಯ ಹಾಕಿ ಆಟಗಾರ ಡಿ.ಎಸ್.ದರ್ಶನ್ ಚಾಲನೆ ನೀಡಿದರು. ಪ್ರಾಂಶುಪಾಲರಾದ ಡಾ.ರೋಹಿಣಿ ನಾಗಪದ್ಮ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಸಿ.ಸುದಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.