ADVERTISEMENT

ರ‍್ಯಾಂಕಿಂಗ್‌: ದಾಖಲೆ ಬರೆದ ಭಾರತ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:53 IST
Last Updated 3 ಮಾರ್ಚ್ 2020, 19:53 IST

ಲೂಸನ್‌: ಭಾರತದ ಪುರುಷರ ಹಾಕಿ ತಂಡ ಸೋಮವಾರ ಬಿಡುಗಡೆಯಾಗಿರುವ ಎಫ್‌ಐಎಚ್‌ ವಿಶ್ವ ಕ್ರಮಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿ ದಾಖಲೆ ಬರೆದಿದೆ.

2003ರಲ್ಲಿ ರ‍್ಯಾಂಕಿಂಗ್‌ ಪದ್ಧತಿ ಜಾರಿಯಾದ ಬಳಿಕ ಮೊದಲ ಸಲ ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ಬಡ್ತಿ ಹೊಂದಿದೆ.

ಎಫ್‌ಐಎಚ್‌ ಪ್ರೊ ಲೀಗ್‌ನ ಆರಂಭದ ಮೂರು ಪಂದ್ಯಗಳಲ್ಲಿ ಮನಪ್ರೀತ್‌ ಸಿಂಗ್‌ ಬಳಗ ಅಪೂರ್ವ ಸಾಮರ್ಥ್ಯ ತೋರಿತ್ತು. ಹೀಗಾಗಿ ಒಂದು ಸ್ಥಾನ ಪ್ರಗತಿ ಕಂಡಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಅರ್ಜೆಂಟೀನಾ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ.

ADVERTISEMENT

ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡವು ಅಗ್ರಪಟ್ಟ ಕಾಪಾಡಿಕೊಂಡಿದೆ. ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಮುಂದುವರಿದಿವೆ.

ಮಹಿಳೆಯರ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ಒಂಬತ್ತನೇ ಸ್ಥಾನಕ್ಕೆ ಮರಳಿದೆ. ನೆದರ್ಲೆಂಡ್ಸ್‌ ತಂಡ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ, ಅರ್ಜೆಂಟೀನಾ, ಜರ್ಮನಿ ಮತ್ತು ಇಂಗ್ಲೆಂಡ್‌ ತಂಡಗಳು ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.