ADVERTISEMENT

ಹಾಕಿ: ಶ್ರೇಯಸ್‌ ಹ್ಯಾಟ್ರಿಕ್‌ ಗೋಲು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 19:45 IST
Last Updated 23 ನವೆಂಬರ್ 2022, 19:45 IST

ಬೆಂಗಳೂರು: ಶ್ರೇಯಸ್ ಆರ್‌. ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಬ್ಲ್ಯೂಸ್ಟಾರ್ ಹಾಕಿ ಕ್ಲಬ್ ತಂಡವು ರಾಜ್ಯ ಸಿ ಡಿವಿಷನ್‌ ಲೀಗ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಬ್ಲ್ಯೂಸ್ಟಾರ್ 7–2ರಿಂದ ಸದರ್ನ್‌ ಅಲ್ಫಾ ಸ್ಪೋರ್ಟ್ಸ್ ಅಕಾಡೆಮಿ ತಂಡವನ್ನು ಮಣಿಸಿತು. ಶ್ರೇಯಸ್‌ 23, 43 ಮತ್ತು 49ನೇ ನಿಮಿಷಗಳಲ್ಲಿ ಗೋಲು ಕೈಚಳಕ ತೋರಿದರು. ಶ್ರೀ ಹರ್ಷ (17, 40ನೇ ನಿಮಿಷ), ಧನುಷ್‌ ಎಂ. (34ನೇ ನಿ.) ಮತ್ತು ಸುಂದರ್ ರಾಜ್‌ (46ನೇ ನಿ.) ವಿಜೇತ ತಂಡಕ್ಕಾಗಿ ಗೋಲು ಗಳಿಸಿದರು.

ಸದರ್ನ್‌ ಅಲ್ಫಾ ತಂಡದ ಪರ ಧನು ಷ್‌ (24ನೇ ನಿ.) ಮತ್ತು ಕವೀ ಶ್ವರನ್‌ (48ನೇ ನಿ.) ಗೋಲು ಹೊಡೆದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಸಹ್ಯಾದ್ರಿ ಸ್ಪೋರ್ಟ್ಸ್ ಕ್ಲಬ್‌ 3–0ಯಿಂದ ಐಡಿ ಯಲ್ ಸ್ಪೋರ್ಟ್ಸ್ ಅಕಾಡೆಮಿ ತಂಡಕ್ಕೆ ಸೋಲುಣಿಸಿತು. ಸಹ್ಯಾದ್ರಿ ಪರ ಸುರೇಶ್‌ (2ನೇ ನಿ.), ದರ್ಶನ್ ಪವಾರ್ (10ನೇ ನಿ.) ಮತ್ತು ಸಾಗರ್ ಆರ್‌. (36ನೇ ನಿ.) ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.