ADVERTISEMENT

ಚೆಸ್: ಸೆಮಿಫೈನಲ್‌ಗೆ ಕೊನೆರು ಹಂಪಿ

ಪಿಟಿಐ
Published 16 ಜುಲೈ 2020, 21:48 IST
Last Updated 16 ಜುಲೈ 2020, 21:48 IST
ಕೊನೆರು ಹಂಪಿ
ಕೊನೆರು ಹಂಪಿ   

ಚೆನ್ನೈ: ಭಾರತದ ಅಗ್ರಶ್ರೇಯಾಂಕದ ಆಟಗಾರ್ತಿ ಕೊನೆರು ಹಂಪಿ ಗುರುವಾರ ಇಲ್ಲಿ ನಡೆದ ಮಹಿಳೆಯರ ಸ್ಪೀಡ್ ಚೆಸ್ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ ಪ್ರವೇಶಿಸಿದರು.

ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಆಗಿರುವ ಹಂಪಿ, ಟೂರ್ನಿಯ ನಾಲ್ಕನೇ ಲೆಗ್‌ನಲ್ಲಿ 6–5 ರಿಂದ ರಷ್ಯಾದ ವ್ಯಾಲೆಂಟಿನಾ ಗುನಿನಾ ವಿರುದ್ಧ ಮೇಲುಗೈ ಸಾಧಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಹಂಪಿ, ಈ ಪಂದ್ಯದ ಆರಂಭದಲ್ಲಿಯೇ ಉತ್ತಮ ಮುನ್ನಡೆ ಸಾಧಿಸಿದರು. ಗುನಿನಾ ತಿರುಗೇಟು ನೀಡುವ ಮುನ್ನವೇ ಹಂಪಿ ಗೆಲುವಿನ ಸಮೀಪ ಸಾಗಿದ್ದರು.

ADVERTISEMENT

ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ, ಚೀನಾದ ಹೋ ಐಫಾನ್ ಕಜಕಸ್ತಾನದ ಝಾನ್ಸಯಾ ಅಬ್ದುಮಲಿಕ್ ವಿರುದ್ಧ 7.5–3.5 ರಿಂದ ಜಯಿಸಿದರು.

ಈ ಗ್ರ್ಯಾನ್‌ಪ್ರೀಯಲ್ಲಿ ಇದು ಅಂತಿಮ ಸುತ್ತಿನ ಸ್ಪರ್ಧೇಯಾಗಿದೆ. ಇದರಲ್ಲಿ 21 ಆಟಗಾರ್ತಿಯರು ಸ್ಪರ್ಧಿಸಿದ್ದಾರೆ. ಪ್ರತಿಯೊಂದು ಗ್ರ್ಯಾನ್‌ಪ್ರೀಯು 16 ಆಟಗಾರರ ನಾಕ್‌ಔಟ್ ಸುತ್ತುಗಳದ್ದಾಗಿದೆ. ಜುಲೈ 20ರಂದು ಸೂಪರ್ ಫೈನಲ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.