ನವದೆಹಲಿ: ಅನುಭವಿ ಡ್ರ್ಯಾಗ್ ಫ್ಲಿಕ್ಕರ್ ಅರಿಜಿತ್ ಸಿಂಗ್ ಹುಂಡಲ್ ಅವರು ನಾಲ್ಕು ರಾಷ್ಟ್ರಗಳ ಜೂನಿಯರ್ ಪುರುಷರ ಹಾಕಿ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ನಾಯಕರಾಗಿದ್ದಾರೆ. ರಕ್ಷಣೆ ಆಟಗಾರ ಅಮೀರ್ ಅಲಿ ಉಪನಾಯಕರಾಗಿದ್ದಾರೆ.
ಟೂರ್ನಿ ಬರ್ಲಿನ್‌ನಲ್ಲಿ ಜೂನ್ 21ರಂದು ಆರಂಭವಾಗಲಿದೆ. ವರ್ಷದ ಕೊನೆಗೆ ಚೆನ್ನೈ ಮತ್ತು ಮಧುರೈನಲ್ಲಿ ನಡೆಯಲಿರುವ ಜೂನಿಯರ್ ವಿಶ್ವ ಕಪ್‌ಗೆ ಅಭ್ಯಾಸದ ಭಾಗವಾಗಿ ಈ ಟೂರ್ನಿ ನಡೆಯಲಿದೆ. ಭಾರತದ ಜೊತೆಗೆ ಆತಿಥೇಯ ಜರ್ಮನಿ, ಸ್ಪೇನ್ ಮತ್ತು ಆಸ್ಟ್ರೇಲಿಯಾ ಭಾಗವಹಿಸುವ ಇತರ ಮೂರು ತಂಡಗಳು.
ವಿಕ್ರಮಜಿತ್ ಸಿಂಗ್, ವಿವೇಕ್ ಲಾಕ್ರಾ ಗೋಲ್‌ಕೀಪರ್‌ಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.