ADVERTISEMENT

ಉನ್ನತ ಮಟ್ಟದ ಸೌಲಭ್ಯ ಒದಗಿಸಿ: ವಿನೇಶಾ

ಪಿಟಿಐ
Published 12 ಆಗಸ್ಟ್ 2018, 19:30 IST
Last Updated 12 ಆಗಸ್ಟ್ 2018, 19:30 IST
ವಿನೇಶಾ ಪೋಗಟ್‌
ವಿನೇಶಾ ಪೋಗಟ್‌   

ನವದೆಹಲಿ: ‘ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕುಸ್ತಿಪಟುಗಳಿಂದ ಪದಕಗಳನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಅದಕ್ಕಾಗಿ ಸಿದ್ಧತೆ ನಡೆಸಲು ರಾಷ್ಟ್ರದಲ್ಲಿ ಉನ್ನತ ಮಟ್ಟದ ಸೌಲಭ್ಯಗಳು ನಮಗೆ ಸಿಗುವುದಿಲ್ಲ’ ಎಂದು ಭಾರತದ ಕುಸ್ತಿಪಟು ವಿನೇಶಾ ಪೋಗಟ್‌ ಹೇಳಿದ್ದಾರೆ.

23 ವರ್ಷದ ವಿನೇಶಾ ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಸ್ಪೇನ್‌ನಲ್ಲಿ ನಡೆದ ಗ್ರ್ಯಾನ್‌ ಪ್ರೀನಲ್ಲಿಯೂ ಅವರು ಚಿನ್ನಕ್ಕೆ ಕೊರಳೊಡ್ಡಿದ್ದರು.

‘ಅತ್ಯಂತ ಕಠಿಣ ಸವಾಲಿನಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಗಳಿಸಲು ಅನೇಕ ಸ್ತರಗಳಲ್ಲಿ ಸಿದ್ಧತೆ ನಡೆಸಬೇಕಾಗುತ್ತದೆ. ಇದಕ್ಕಾಗಿ ಅತ್ಯುನ್ನತ ಸೌಲಭ್ಯಗಳನ್ನು ಕಲ್ಪಿಸಬೇಕು. ತರಬೇತಿ ಕೇಂದ್ರಗಳಲ್ಲಿ ನೀಡುವ ಆಹಾರದ ಗುಣಮಟ್ಟ ಕೂಡ ಮುಖ್ಯ’ ಎಂದು ವಿನೇಶಾ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಭಾರತದ ಕುಸ್ತಿ ಫೆಡರೇಷನ್‌ ಈ ನಿಟ್ಟಿನಲ್ಲಿ ಕೆಲವು ಸುಧಾರಣೆಗಳನ್ನು ತಂದಿದೆ. ಆದರೆ, ಇನ್ನೂ ಅನೇಕ ಸ್ತರಗಳಲ್ಲಿ ಬದಲಾವಣೆಗಳಾಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.