ADVERTISEMENT

ಪದಕ ಖಚಿತಪಡಿಸಿಕೊಂಡ ಭಾರತ

ವಿಶ್ವ ಜೂ. ಬ್ಯಾಡ್ಮಿಂಟನ್ ಮಿಶ್ರ ತಂಡ ವಿಭಾಗ

ಪಿಟಿಐ
Published 9 ಅಕ್ಟೋಬರ್ 2025, 14:10 IST
Last Updated 9 ಅಕ್ಟೋಬರ್ 2025, 14:10 IST
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಮಿಶ್ರ ತಂಡ ವಿಭಾಗದಲ್ಲಿ ಗುರುವಾರ  ಕೊರಿಯಾ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದ ಭಾರತದ ತಂಡದವರು ಸಂಭ್ರಮಿಸಿದ್ದು ಹೀಗೆ....
ಪಿಟಿಐ ಚಿತ್ರ
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಮಿಶ್ರ ತಂಡ ವಿಭಾಗದಲ್ಲಿ ಗುರುವಾರ  ಕೊರಿಯಾ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದ ಭಾರತದ ತಂಡದವರು ಸಂಭ್ರಮಿಸಿದ್ದು ಹೀಗೆ.... ಪಿಟಿಐ ಚಿತ್ರ   

ಗುವಾಹಟಿ: ಆತಿಥೇಯ ಭಾರತ ತಂಡವು ಸುಮಾರು ಮೂರು ಗಂಟೆಗಳ ಸೆಣಸಾಟದಲ್ಲಿ ಕೊರಿಯಾ ತಂಡವನ್ನು ಸೋಲಿಸಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್‌ ಮಿಶ್ರ ತಂಡ ವಿಭಾಗದಲ್ಲಿ ಸೆಮಿಫೈನಲ್ ತಲುಪಿತು. ಆ ಮೂಲಕ ಈ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲಿ ಮೊದಲ ಸಲ ಬಾರಿ ಪದಕವನ್ನು ಖಚಿತಪಡಿಸಿಕೊಂಡಿತು.

ಭಾರತ ತಂಡ, ಇಲ್ಲಿನ ನ್ಯಾಷನಲ್‌ ಸೆಂಟರ್ ಆಫ್‌ ಎಕ್ಸಲೆನ್ಸ್‌ನಲ್ಲಿ ಗುರುವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 44–45, 45–30, 45–33 ರಿಂದ ಜಯಗಳಿಸಿತು. ಭಾರತ ತಂಡವು ಸೆಮಿಫೈನಲ್‌ನಲ್ಲಿ ಏಷ್ಯನ್ 19 ವರ್ಷದೊಳಗಿನವರ ಮಿಶ್ರ ಟೀಮ್‌ ಚಾಂಪಿಯನ್ ತಂಡವಾದ ಇಂಡೊನೇಷ್ಯಾ ತಂಡವನ್ನು ಎದುರಿಸಲಿದೆ.

ಇಂಡೊನೇಷ್ಯಾ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ 45–35, 45–35 ರಿಂದ ಚೀನಾ ತೈಪಿ ತಂಡವನ್ನು ಮಣಿಸಿತು.

ADVERTISEMENT

ಕೊರಿಯಾ ಡಬಲ್ಸ್‌ನಲ್ಲಿ ಪ್ರಬಲವಾಗಿರುವ ಕಾರಣ, ಭಾರತ ತಂಡ ಸಿಂಗಲ್ಸ್‌ ಫಲಿತಾಂಶವನ್ನು ನೆಚ್ಚಿಕೊಂಡಂತೆ ಇತ್ತು. ಅದಕ್ಕೆ ತಕ್ಕಂತೆ ತಂತ್ರಗಾರಿಕೆ ರೂಪಿಸಿ ಗೆಲ್ಲುವಲ್ಲಿ ಸಫಲವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.