ನವದೆಹಲಿ: ಭಾರತವು ಮುಂದಿನ ವರ್ಷದ ಜೂನಿಯರ್ ವಿಶ್ವಕಪ್ ಆತಿಥ್ಯವನ್ನು ವಹಿಸಿಕೊಂಡಿದೆ. ಇದರಲ್ಲಿ ರೈಫಲ್, ಪಿಸ್ತೂಲ್ ಮತ್ತು ಶಾಟ್‌ಗನ್ ವಿಭಾಗಗಳು ಒಳಗೊಂಡಿವೆ ಎಂದು ಭಾರತ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಶನಿವಾರ ಇಲ್ಲಿ ತಿಳಿಸಿದೆ.
ಇದರ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ.
ಇದು ಭಾರತ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್‌ನ (ಐಎಸ್‌ಎಸ್‌ಎಫ್) ಮೂರನೇ ಪ್ರಮುಖ ಪಂದ್ಯಾವಳಿ ಆಗಿದೆ. 2023ರಲ್ಲಿ ಭೋಪಾಲ್‌ನಲ್ಲಿ ವಿಶ್ವಕಪ್ ನಡೆದಿತ್ತು. ಈ ವರ್ಷದ ಆರಂಭದಲ್ಲಿ ವರ್ಷಾಂತ್ಯದ ವಿಶ್ವಕಪ್ ಫೈನಲ್ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.