ADVERTISEMENT

ಸೂಪರ್‌ ಕುಂಗ್ ಶುಯೆಂಗ್‌ ಕಪ್‌: ಭಾರತ ತಂಡಕ್ಕೆ ರಾಜ್ಯದ ಅರವಿಂದ್‌ ನಾಯಕ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 16:57 IST
Last Updated 8 ಡಿಸೆಂಬರ್ 2018, 16:57 IST
ಸೂಪರ್‌ ಕುಂಗ್ ಶುಯೆಂಗ್‌ ಕಪ್‌ (ಎಸ್‌ಕೆಎಸ್‌) ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದವರಿಗೆ ಶನಿವಾರ ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜ್‌ (ಮಧ್ಯ) ಕಿಟ್‌ ವಿತರಿಸಿದರು –ಪ್ರಜಾವಾಣಿ ಚಿತ್ರ
ಸೂಪರ್‌ ಕುಂಗ್ ಶುಯೆಂಗ್‌ ಕಪ್‌ (ಎಸ್‌ಕೆಎಸ್‌) ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದವರಿಗೆ ಶನಿವಾರ ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜ್‌ (ಮಧ್ಯ) ಕಿಟ್‌ ವಿತರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕದ ಅರವಿಂದ್‌ ಆರ್ಮುಗಂ ಅವರು ಡಿಸೆಂಬರ್‌ 11ರಿಂದ 16ರವರೆಗೆ ಹಾಂಕಾಂಗ್‌ನಲ್ಲಿ ನಡೆಯುವ ಸೂಪರ್‌ ಕುಂಗ್ ಶುಯೆಂಗ್‌ ಕಪ್‌ (ಎಸ್‌ಕೆಎಸ್‌) ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಶನಿವಾರ 12 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಅರವಿಂದ್‌ ಅವರನ್ನು ನಾಯಕರನ್ನಾಗಿ ನೇಮಿಸಿದೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಹಾಂಕಾಂಗ್‌ ಮತ್ತು ಥಾಯ್ಲೆಂಡ್‌ ತಂಡಗಳೂ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ADVERTISEMENT

2016ರಲ್ಲಿ ನಡೆದಿದ್ದ ಎಸ್‌ಕೆಎಸ್‌ ಕಪ್‌ನಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸಿತ್ತು. ಮೂರನೇ ಸ್ಥಾನ ನಿರ್ಧರಿಸಲು ನಡೆದ ಪೈಪೋಟಿಯಲ್ಲಿ 90–60 ಪಾಯಿಂಟ್ಸ್‌ನಿಂದ ಹಾಂಕಾಂಗ್‌ ತಂಡವನ್ನು ಸೋಲಿಸಿತ್ತು.

ತಂಡ ಇಂತಿದೆ: ಅರವಿಂದ್‌ ಆರ್ಮುಗಂ (ನಾಯಕ), ಜೀವನಾಥಮ್‌ ಪಾಂಡಿ, ಲವನೀತ್‌ ಸಿಂಗ್‌ ಅತ್ವಾಲ್‌, ಪ್ರತ್ಯಾಂಶು ತೋಮರ್‌, ವಿಶೇಷ್‌ ಭೃಗುವಂಶಿ, ಜತಿನ್‌ ಶೋಕಾಂಡ, ಪ್ರಿನ್ಸ್‌ಪಾಲ್‌ ಸಿಂಗ್‌, ಬಿ.ಕೆ.ಅನಿಲ್‌ ಕುಮಾರ್‌, ಸೆಜಿನ್‌ ಮ್ಯಾಥ್ಯೂ, ಅರವಿಂದ್‌ ಕುಮಾರ್‌, ಅಖಿಲನ್‌ ಪಾರಿ ಮತ್ತು ಜಸ್ಟಿನ್‌ ಜೋಸೆಫ್‌.

ಮುಖ್ಯ ಕೋಚ್‌: ಸತ್‌ ಪ್ರಕಾಶ್‌ ಯಾದವ್‌, ಸಹಾಯಕ ಕೋಚ್‌: ಅಮನ್‌ ಶರ್ಮಾ, ಫಿಸಿಯೊ: ರಾಜ್‌ಕುಮಾರ್‌ ದುಬೆ, ಮ್ಯಾನೇಜರ್‌: ಶಫಿಕ್‌ ಶೇಖ್‌, ಫಿಬಾ ರೆಫರಿ: ವಿಶ್ವಜೀತ್‌ ಓಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.