ನವದೆಹಲಿ: ಭಾರತ ಮಹಿಳಾ ತಂಡವು ಪ್ರಿನ್ಸೆಸ್ ಕಪ್ ವಾಲಿಬಾಲ್ ಟೂರ್ನಿಯ ಪ್ರಿಲಿಮನರಿ ಸುತ್ತಿನ ಮೂರನೇ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.
ಥಾಯ್ಲೆಂಡ್‌ನ ನಖೊನ್ ಪ್ಯಾಥೊಮ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ 25–17, 25–16, 25–12ರಿಂದ ಮಲೇಷ್ಯಾ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡದ ಪರ ಅನುಶ್ರೀ ಕೆ.ಪಿ. ಮತ್ತು ಸೂರಿಯಾ ಉತ್ತಮ ಆಟವಾಡಿದರು.
ಭಾರತ ತಂಡಕ್ಕೆ ಇದು ಸತತ ಮೂರನೇ ಜಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.