ADVERTISEMENT

ಆರ್ಚರಿ ವಿಶ್ವಕಪ್‌: ಭಾರತ ಪಾರಮ್ಯ

ಪಿಟಿಐ
Published 6 ಮೇ 2025, 16:13 IST
Last Updated 6 ಮೇ 2025, 16:13 IST
ಅಭಿಷೇಕ್ ವರ್ಮಾ
ಅಭಿಷೇಕ್ ವರ್ಮಾ   

ಶಾಂಘೈ: ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಸ್ಟೇಜ್‌ 2ರ ಕಾಂಪೌಂಡ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದುಕೊಂಡವು.

ಮಂಗಳವಾರ ನಡೆದ ಪುರುಷರ ವೈಯಕ್ತಿಕ ರ‍್ಯಾಂಕಿಂಗ್‌ ಸುತ್ತಿನಲ್ಲಿ ಅನುಭವಿ ಅಭಿಷೇಕ್ ವರ್ಮಾ (714 ಅಂಕ) ಮತ್ತು ರಿಷಭ್ ಯಾದವ್ (713) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ಅನುಭವಿ ಓಜಸ್ ದೇವತಾಳೆ (707) ಅಗ್ರ 10ರಲ್ಲಿ ಸ್ಥಾನ ಪಡೆದರು. ಇದರೊಂದಿಗೆ ಪುರುಷರ ತಂಡವು (2134) ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆಯಿತು. ದಕ್ಷಿಣ ಕೊರಿಯಾ ತಂಡ (2132) ನಂತರದ ಸ್ಥಾನ ಪಡೆಯಿತು.

ಮಹಿಳಾ ವಿಭಾಗದಲ್ಲಿ ಮಧುರಾ ಧಮನ್‌ ಗಾಂವ್ಕರ್ 708 ಅಂಕಗಳೊಂದಿಗೆ (ಹಿಂದಿನ ಶ್ರೇಷ್ಠ 683) ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದರು. ಅರ್ಹತಾ ಸುತ್ತಿನಲ್ಲಿ ಅವರು ಮೂರನೇ ಸ್ಥಾನ ಪಡೆದರು.

ADVERTISEMENT

ಅನುಭವಿ ಬಿಲ್ಗಾರ್ತಿ ಜ್ಯೋತಿ ಸುರೇಖಾ ವೆಣ್ಣಾಂ (705 ಅಂಕ) ಆರನೇ ಮತ್ತು ಯುವ ಬಿಲ್ಗಾರ್ತಿ ಚಕಿತಾ ತನಿಪರ್ತಿ (701) 11ನೇ ಸ್ಥಾನ ಪಡೆದರು. ಇದರೊಂದಿಗೆ ಭಾರತ ತಂಡ 2114 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಮೆಕ್ಸಿಕೊ (2109) ಮತ್ತು ದಕ್ಷಿಣ ಕೊರಿಯಾ (2107) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದವು.

ಭಾರತದ ಕಾಂಪೌಂಡ್‌ ಮಿಶ್ರ ತಂಡವು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದು ಈಗಾಗಲೇ ಪ್ರಿ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆದಿವೆ. ಬುಧವಾರ ಕಾಂಪೌಂಡ್ ಎಲಿಮಿನೇಷನ್ ಸುತ್ತು ಆರಂಭವಾಗಲಿದೆ. ನಂತರ ರಿಕರ್ವ್ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.