ADVERTISEMENT

ಜೋಹರ್ ಕಪ್ ಹಾಕಿ: ಆಸ್ಟ್ರೇಲಿಯಾಕ್ಕೆ ಜಯ

ಪಿಟಿಐ
Published 15 ಅಕ್ಟೋಬರ್ 2025, 15:55 IST
Last Updated 15 ಅಕ್ಟೋಬರ್ 2025, 15:55 IST
   

ಜೋಹರ್ (ಮಲೇಷ್ಯಾ): ಭಾರತ ಜೂನಿಯರ್ ಪುರುಷರ ತಂಡವು, ಸುಲ್ತಾನ್ ಆಫ್‌ ಜೋಹರ್ ಕಪ್‌ ಹಾಕಿ ಟೂರ್ನಿ ಪಂದ್ಯದಲ್ಲಿ ಬುಧವಾರ 2–4 ರಿಂದ ಆಸ್ಟ್ರೇಲಿಯಾ ಎದುರು ಸೋತಿತು. ಇದು ಈ ಟೂರ್ನಿಯ ಗುಂಪು ಹಂತದಲ್ಲಿ ಭಾರತಕ್ಕೆ ಮೊದಲ ಸೋಲು.

ನಾಯಕ ರೋಹಿತ್ (22ನೇ ನಿಮಿಷ) ಮತ್ತು ಅರ್ಷದೀಪ್‌ ಸಿಂಗ್‌ (60ನೇ ನಿಮಿಷ) ಭಾರತ ತಂಡದ ಪರ ಗೋಲು ಗಳಿಸಿದರು. ಆಸ್ಕರ್‌ ಸ್ಪ್ರೌಲ್‌ (39, 42ನೇ ನಿಮಿಷ), ಆ್ಯಂಡ್ರೂ ಪ್ಯಾಟ್ರಿಕ್‌ (40ನೇ ನಿಮಿಷ), ನಾಯಕ ಡಿಲಾನ್‌ ಡೌನಿ (51ನೇ ನಿಮಿಷ) ಅವರು ಆಸ್ಟ್ರೇಲಿಯಾ ಪರ ಗೋಲು ಹೊಡೆದರು.

ಭಾರತ 4 ಪಂದ್ಯಗಳಿಂದ ಏಳು ಪಾಯಿಂಟ್ಸ್‌ ಗಳಿಸಿದ್ದು (ಎರಡು ಗೆಲುವು, ಒಂದು ಡ್ರಾ, ಒಂದು ಸೋಲು) ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 4 ಪಂದ್ಯಗಳಿಂದ 10 ಪಾಯಿಂಟ್ಸ್‌ ಕಲೆಹಾಕಿ ಅಗ್ರಸ್ಥಾನದಲ್ಲಿದೆ.

ADVERTISEMENT

ಭಾರತ ತಂಡವು ಮುಂದಿನ ಪಂದ್ಯವನ್ನು ಅಕ್ಟೋಬರ್ 17ರಂದು ಮಲೇಷ್ಯಾ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.